ADVERTISEMENT

ಆ್ಯಪಲ್‌ ವೈರ್‌ಲೆಸ್‌ ಏರ್‌ಪಾಡ್‌

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 19:30 IST
Last Updated 7 ಮಾರ್ಚ್ 2017, 19:30 IST
ಆ್ಯಪಲ್‌ ವೈರ್‌ಲೆಸ್‌ ಏರ್‌ಪಾಡ್‌
ಆ್ಯಪಲ್‌ ವೈರ್‌ಲೆಸ್‌ ಏರ್‌ಪಾಡ್‌   

ಸಂಗೀತಪ್ರಿಯರ ಗಮನ ತನ್ನತ್ತ ಸೆಳೆಯಲು ಆ್ಯಪಲ್‌ ಕಂಪೆನಿಯು ಏರ್‌ಪಾಡ್ಸ್ (airpods) ಪರಿಚಯಿಸಿದೆ. ಇವುಗಳ ವಿಶೇಷತೆ ಏನೆಂದರೆ, ಇವು ವೈರ್‌ಲೆಸ್‌ ಏರ್‌ಪಾಡ್‌ಗಳಾಗಿವೆ.  ಕಿವಿಗೂ ಮೊಬೈಲ್‌ಗೂ ಸಂಪರ್ಕ ಕೊಂಡಿಯಾಗಿ ವೈರ್‌ಗಳು ಇಲ್ಲ.

ಆ್ಯಪಲ್‌ 7 ಮತ್ತು 7 ಪ್ಲಸ್‌ ಆವೃತ್ತಿಯ ಫೋನುಗಳ ಬಳಕೆಗೆಂದೇ ವಿಶೇಷವಾಗಿ ಇವುಗಳನ್ನು ಸಿದ್ಧಪಡಿಸಲಾಗಿದೆ. ಏರ್‌ಪಾಡ್‌ ಇರಿಸಲು ಮತ್ತು ಚಾರ್ಜ್‌ ಮಾಡಲು ಮೂರು ಬೆರಳು ಅಳತೆಯ ಚಾರ್ಜಿಂಗ್‌ ಕೇಸ್‌ ಮತ್ತು ಅದರಲ್ಲೇ ಏರ್‌ಪಾಡ್‌ ಇರಿಸಬಹುದಾದ ವಿನ್ಯಾಸ ತಯಾರಿಸಿದ್ದಾರೆ.

ಪ್ರವಾಸ ಪ್ರಿಯರು, ಬೈಕ್‌ ಸವಾರರು, ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ಏರ್‌ಪಾಡ್‌ಗಳನ್ನು ಬಿಡುಗಡೆಗೊಳಿಸಲಾಗಿದೆ.

ADVERTISEMENT

ಡಬ್ಲೂ1 ಚಿಪ್‌ ಹೊಂದಿರುವ ಏರ್‌ಪಾಡ್ಸ್‌ಗಳು ಡ್ಯುಯಲ್‌ ಆಪ್ಟಿಕಲ್‌ ಸೆನ್ಸರ್‌ ಹೊಂದಿವೆ. ಒಮ್ಮೆ ಫೋನಿಗೆ ಹೊಂದಾಣಿಕೆ ಮಾಡಿದರೆ ಆಯಿತು. ಪ್ರತಿ ಸಲ ಕನೆಕ್ಟ್‌ ಮಾಡುವ ಗೋಜಿಲ್ಲ. ಮ್ಯೂಸಿಕ್‌ ಮೆನುವಿಗೆ ಬರುತ್ತಿದ್ದಂತೆ ತಾನಾಗೇ ಕನೆಕ್ಟ್‌ ಮಾಡಿಕೊಳ್ಳುತ್ತದೆ. ಯುಎಸ್‌ಬಿ ಚಾರ್ಜಿಂಗ್‌ ಮೂಲಕ ರಿಚಾರ್ಜ್‌ ಮಾಡಬಹುದಾಗಿದೆ. ಕಿವಿಯಿಂದ ಒಂದು ಏರ್‌ಪಾಡ್‌ ತೆಗೆದರೆ ಸಂಗೀತ ಮ್ಯೂಟ್‌ ಆಗುತ್ತದೆ. ತಜ್ಞರ ಪ್ರಕಾರ ಏರ್‌ಪಾಡ್ಸ್‌ಗಳಲ್ಲಿ ಆಲಿಸುವ ಸಂಗೀತ ಉತ್ಕೃಷ್ಟ ಗುಣಮಟ್ಟದ್ದಾಗಿದೆ. ಇನ್ನೊಂದು ವಿಶೇಷ ಎಂದರೆ ಈ ಏರ್‌ಪಾಡ್ಸ್‌ಗಳ ಮೇಲೆ ಯಾವುದೇ ಕೀ ಅಥವಾ ಬಟನ್‌ಗಳಿಲ್ಲ. ಸೆನ್ಸರ್‌ ಅಳವಡಿಸಿರುವುದರಿಂದ ನಮಗಿಷ್ಟದ ರೀತಿ ಸೆಟಿಂಗ್ಸ್‌ ಮಾಡಿಟ್ಟುಕೊಳ್ಳಬಹುದು.

ಐಫೋನ್‌ನಲ್ಲಿರುವ ಸಿರಿ ಧ್ವನಿಸೇವೆ ಸೌಲಭ್ಯದ ಮೂಲಕ ಮನವಿ ಸಲ್ಲಿಸಿ ಏರ್‌ಪಾಡ್ಸ್‌ಗಳನ್ನು ಚಾಲನೆಗೊಳಿಸಬಹುದು  ಅಥವಾ ಸೆಟಿಂಗ್ಸ್‌ಗೆ ತೆರಳಿ, ಬ್ಲೂಟೂಥ್‌ ಆಪ್ಷನ್‌ ಮೇಲೆ ಪ್ರೆಸ್‌ ಮಾಡಿರಿ. ಅದರಲ್ಲಿ ಕಾಣಿಸುವ ‘ಐ‘ ಕೆಟಗರಿ ಮೇಲೆ ಕ್ಲಿಕ್‌ ಮಾಡಿ ಏರ್‌ಪಾಡ್‌ ಸೇವೆ ಪ್ರಾರಂಭಿಸಬಹುದಾಗಿದೆ.

ಕಿವಿಯಲ್ಲಿರಿಸಿರುವ ವೈರ್‌ಲೆಸ್‌ ಏರ್‌ಪಾಡ್ಸ್‌ಗಳು ಸುಲಭವಾಗಿ ಹೊರಬರುವುದಿಲ್ಲ. ಕಿವಿಯಿಂದ ಜಾರಿ ಹೋಗದಂತೆಯೂ ವಿನ್ಯಾಸಗೊಳಿಸಲಾಗಿದೆ. ಒಮ್ಮೆ ಚಾರ್ಜ್‌ ಮಾಡಿದರೆ ಒಂದು ದಿನದ ಮಟ್ಟಿಗೆ ಸಂಗೀತ ಆಲಿಸಬಹುದಾಗಿದೆ. ನಿರಂತರವಾಗಿ ಕರೆ  ಸ್ವೀಕರಿಸುವವರು ಏರ್‌ಪಾಡ್ಸ್‌ನ ಬ್ಯಾಟರಿ ಪ್ರಮಾಣವನ್ನು ಫೋನಿನ ಡಿಸ್‌ಪ್ಲೇ ಮೇಲೆ ನೋಡಬಹುದಾಗಿದೆ.

ಅಚಾನಕ್ಕಾಗಿ ಏರ್‌ಪಾಡ್‌ನ ಒಂದು ಭಾಗ ಕಳೆದು ಹೋದರೆ ಇನ್ನೊಂದು ಕೆಲಸ ಮಾಡುವುದಿಲ್ಲ. ಮತ್ತೆ ಹೊಸ ಸೆಟ್‌ ಖರೀದಿಸಬೇಕಾಗುತ್ತದೆ.
ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಆ್ಯಪಲ್‌ ಏರ್‌ಪಾಡ್‌ ಬೆಲೆ ₹ 15,400.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.