ADVERTISEMENT

ಇಂದಿನಿಂದ ಎಕ್ಸ್‌ಕಾನ್‌ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2015, 19:34 IST
Last Updated 24 ನವೆಂಬರ್ 2015, 19:34 IST

ಬೆಂಗಳೂರು: ನಿರ್ಮಾಣ ಸಲಕರಣೆ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ವಾಣಿಜ್ಯ ಮೇಳವು ‘ಎಕ್ಸ್‌ಕಾನ್‌’, ಬುಧವಾರದಿಂದ ಐದು ದಿನಗಳ ಕಾಲ ನಗರದಲ್ಲಿ ನಡೆಯಲಿದೆ. ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ದಕ್ಷಿಣ ಏಷ್ಯಾದ ಅತಿದೊಡ್ಡ ವಾಣಿಜ್ಯ ಮೇಳವು ಭಾನುವಾರದವರೆಗೆ ನಡೆಯಲಿದ್ದು, 22 ದೇಶಗಳ 800 ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸುತ್ತಿವೆ.

‘ನಿರ್ಮಾಣ  ಮತ್ತು ಭೂಮಿ ಅಗೆಯುವ ಸಲಕರಣೆಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಜೆಸಿಬಿ ಇಂಡಿಯಾ, ‘ಭಾರತದಲ್ಲಿಯೇ ತಯಾರಿಸಿದ’ ಯಂತ್ರೋಪಕರಣಗಳನ್ನು  ಪ್ರದರ್ಶಿಸಲಿದ್ದು, ಹೊಸ ತಂತ್ರಜ್ಞಾನ ವನ್ನು ಪರಿಚಯಿಸಲಿದೆ. ‘ಹೆಚ್ಚು ನಿರೀಕ್ಷಿಸಿ’ ಧ್ಯೇಯದಡಿ ಉದ್ದಿಮೆದಾರರ ಗಮನ ಸೆಳೆಯಲಾಗುವುದು’  ಎಂದು ಸಂಸ್ಥೆಯ  ವ್ಯವಸ್ಥಾಪಕ ನಿರ್ದೇಶಕ ವಿಪಿನ್‌ ಸೋಂಧಿ ಅಭಿಪ್ರಾಯ ಪಟ್ಟಿದ್ದಾರೆ.

ಮೂಲ ಸೌಕರ್ಯ ರಂಗದಲ್ಲಿ ಹೆಚ್ಚುತ್ತಿರುವ ನಿರ್ಮಾಣ  ಚಟುವಟಿಕೆಗಳು ಈ ಉದ್ದಿಮೆಯ ವಹಿವಾಟು ವಿಸ್ತರಣೆಗೆ ನೆರವಾಗುತ್ತಿವೆ. ಒಂದು ನೂರು ಸುಸಜ್ಜಿತ ನಗರಗಳ ನಿರ್ಮಾಣ, ನಗರ ಗಳ ಮೂಲ ಸೌಕರ್ಯ ಯೋಜನೆಗಳಾದ ಮೆಟ್ರೊ ರೈಲು, ಬಂದರು ಅಭಿವೃದ್ಧಿ, ಕೈಗಾರಿಕಾ ಕಾರಿಡಾರ್‌, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮತ್ತಿತರ ಯೋಜನೆ ಗಳು  ಉದ್ದಿಮೆ ಬೆಳವಣಿಗೆಗೆ ನೆರವಾಗು ತ್ತಿವೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು. ಸಂಸ್ಥೆಯ ಒಟ್ಟಾರೆ ವಹಿವಾಟಿನಲ್ಲಿ ರಾಜ್ಯದ ಪಾಲು ಶೇ 15 ರಿಂದ ಶೇ 20 ರಷ್ಟಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.