ADVERTISEMENT

ಇಂದಿನಿಂದ ಹೈದರಾಬಾದ್‌–ಬಳ್ಳಾರಿ ವಿಮಾನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST
ಇಂದಿನಿಂದ ಹೈದರಾಬಾದ್‌–ಬಳ್ಳಾರಿ ವಿಮಾನ
ಇಂದಿನಿಂದ ಹೈದರಾಬಾದ್‌–ಬಳ್ಳಾರಿ ವಿಮಾನ   

ಬೆಂಗಳೂರು: ಹೈದರಾಬಾದ್‌– ವಿದ್ಯಾನಗರ (ಬಳ್ಳಾರಿ)– ಹೈದರಾಬಾದ್‌ ಮಧ್ಯೆ ಗುರುವಾರದಿಂದ ವಿಮಾನ ಸಂಪರ್ಕ ಸೇವೆ ಆರಂಭವಾಗಲಿದೆ ಎಂದು ಕೈಗಾರಿಕೆ ಮತ್ತು ಮೂಲ ಸೌಲಭ್ಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದ್ದಾರೆ.

ಈ ಹೊಸ ವಿಮಾನಯಾನ ಸೇವೆಯಿಂದ ರಾಜ್ಯದ ಕೈಗಾರಿಕೆ, ಪ್ರವಾಸೋದ್ಯಮ, ವ್ಯಾಪಾರ ವಹಿವಾಟು, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ. 

ಪ್ರಾದೇಶಿಕ ಸಂಪರ್ಕ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ನಾಲ್ಕು ವಿಮಾನನಿಲ್ದಾಣಗಳನ್ನು ಮೊದಲನೆಯ ಸುತ್ತಿನ ಬಿಡ್ಡಿಂಗ್‍ನಲ್ಲಿ ಆಯ್ಕೆ ಮಾಡಲಾಗಿದೆ. ಮೈಸೂರು, ಬೀದರ್, ವಿದ್ಯಾನಗರ(ಬಳ್ಳಾರಿ) ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನನಿಲ್ದಾಣ ಇವುಗಳಲ್ಲಿ ಸೇರಿವೆ. ಈ ಎಲ್ಲ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಮತ್ತು ಅಲ್ಲಿ ಕಾರ್ಯಚಟುವಟಿಕೆಗಳು ಆದಷ್ಟು ಬೇಗ ಪ್ರಾರಂಭಿಸಲು ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.