ADVERTISEMENT

ಇತರ ಕಂಪೆನಿಗಳಿಗೆ ಇನ್ಫೊಸಿಸ್‌ ಮಾದರಿ

ಪಿಟಿಐ
Published 23 ಮೇ 2017, 19:30 IST
Last Updated 23 ಮೇ 2017, 19:30 IST

ನವದೆಹಲಿ: ‘ಜಾಗತಿಕವಾಗಿ  ಐ.ಟಿ  ಉದ್ಯಮದಲ್ಲಿ ಉದ್ಯೋಗ ಭದ್ರತೆಯ ಆತಂಕ ಎದುರಾಗಿದೆ. ಇಂತಹ ಪ್ರತಿಕೂಕ ಪರಿಸ್ಥಿತಿಯಲ್ಲಿಯೂ  ಇನ್ಫೊಸಿಸ್‌ ಪ್ರತ್ಯೇಕತೆ ಕಾಯ್ದುಕೊಂಡು ಬೇರೆ ಕಂಪೆನಿಗಳಿಗೆ ಮಾದರಿಯಾಗಿರಲಿದೆ’ ಎಂದು ಕಂಪೆನಿ ಸಿಇಒ ವಿಶಾಲ್‌ ಸಿಕ್ಕಾ ಹೇಳಿದ್ದಾರೆ.

‘ಐ.ಟಿ ಉದ್ಯಮಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಬಿಕ್ಕಟ್ಟಿನ ಕುರಿತು ಮಂಗಳವಾರ  ಷೇರುದಾರರಿಗೆ ಪತ್ರ ಬರೆದಿರುವ ಅವರು, ಜಾಗತಿಕ ಸವಾಲುಗಳ ಮಧ್ಯೆಯೂ ಕಂಪೆನಿಯ ವಹಿವಾಟು ಚೇತರಿಸಿಕೊಳ್ಳಲಿದೆ.  ಉದ್ಯೋಗ ಅವಕಾಶ ಸೃಷ್ಟಿಸಲು ಸಂಸ್ಥೆಯು ಶಕ್ತಿ ಮೀರಿ ಪ್ರಯತ್ನಿಸಲಿದೆ’ ಎಂದು ಭರವಸೆ ನೀಡಿದ್ದಾರೆ.

‘ಮುಂದಿನ ಪೀಳಿಗೆಯ ಸೇವಾ ಕಂಪೆನಿಯಾಗಿ ಬೆಳೆಯುವ ಅವಕಾಶ ನಮಗಿದೆ. ಹಿಂದಿನ ಸಾಧನೆಗಳ ಬಲದ ಮೇಲೆ ಸಂಸ್ಥೆಯನ್ನು ಇನ್ನಷ್ಟು ಉತ್ತಮವಾಗಿ ಬೆಳೆಯಬಹುದು’ ಎಂದು 2016–2017ನೇ ಆರ್ಥಿಕ ವರ್ಷದ ವಾರ್ಷಿಕ ವರದಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಜೂನ್‌ 24 ರಂದು ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರ ಒಪ್ಪಿಗೆ ಪಡೆಯಲು ವಾರ್ಷಿಕ ವರದಿಯನ್ನು ಸಲ್ಲಿಸಲಾಗುವುದು ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.