ADVERTISEMENT

ಇ‌ನ್ಫೊಸಿಸ್‌ನ ಹಿರಿಯ ಉಪಾಧ್ಯಕ್ಷ ಸಂಜಯ್‌ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಸಂಜಯ್‌
ಸಂಜಯ್‌   

ಬೆಂಗಳೂರು: ಐ.ಟಿ ದೈತ್ಯ ಸಂಸ್ಥೆ ಇನ್ಫೊಸಿಸ್‌ನ ಹಿರಿಯ ಉಪಾಧ್ಯಕ್ಷ ಸಂಜಯ್‌ ರಾಜಗೋಪಾಲನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಸಂಸ್ಥೆಯ ಸಿಇಒ ಹುದ್ದೆಗೆ ವಿಶಾಲ್‌ ಸಿಕ್ಕಾ ಅವರು ರಾಜೀನಾಮೆ ಸಲ್ಲಿಸಿದ ಒಂದು ತಿಂಗಳ ನಂತರ ಸಂಜಯ್‌ ಅವರು ಸಂಸ್ಥೆ ತೊರೆದಿದ್ದಾರೆ. ಸಿಕ್ಕಾ ಅವರ ರಾಜೀನಾಮೆ ನಂತರ ಸಂಜಯ್‌ ಅವರೂ ಸಂಸ್ಥೆಯಿಂದ ಹೊರ ನಡೆಯಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.

ಸಿಕ್ಕಾ ಅವರು, ‘ಎಸ್‌ಎಪಿ’ನಲ್ಲಿದ್ದ ತಮ್ಮ ಸಹೋದ್ಯೋಗಿಗಳನ್ನು ಇನ್ಫೊಸಿಸ್‌ಗೆ ಕರೆ ತಂದವರಲ್ಲಿ ಸಂಜಯ್‌ ಅವರೂ ಸೇರಿದ್ದರು.  ‘2014ರ ಆಗಸ್ಟ್‌ನಿಂದ 2017ರ ಸೆಪ್ಟೆಂಬರ್‌ವರೆಗೆ ನಾನು ಇನ್ಫೊಸಿಸ್‌ನ ಉದ್ಯೋಗಿಯಾಗಿದ್ದೆ. ಈಗ ನಾನು ಸ್ವತಂತ್ರ ವ್ಯಕ್ತಿಯಾಗಿದ್ದೇನೆ’ ಎಂದು ಸಂಜಯ್‌ ಹೇಳಿಕೊಂಡಿದ್ದಾರೆ.  ಅವರು ಇನ್ಫೊಸಿಸ್‌ನಲ್ಲಿ ಸೃಜನಶೀಲತೆಯ ಡಿಸೈನ್‌ ಥಿಂಕಿಂಗ್‌ ವಿಭಾಗದ ಮುಖ್ಯಸ್ಥರಾಗಿದ್ದರು. ಸಂಜಯ್ ರಾಜೀನಾಮೆ ಬಗ್ಗೆ  ಯಾವುದೇ ಪ್ರತಿಕ್ರಿಯೆ ನೀಡಲು ಇನ್ಫೊಸಿಸ್‌ ವಕ್ತಾರರು ನಿರಾಕರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.