ADVERTISEMENT

ಇನ್ಫೊಸಿಸ್‌ ಮೊದಲ ಸಂಸ್ಥಾಪಕೇತರ ‘ಸಿಇಒ’ ಸಿಕ್ಕಾ ಅಧಿಕಾರ ಸ್ವೀಕಾರ ಇಂದು

​ಪ್ರಜಾವಾಣಿ ವಾರ್ತೆ
Published 31 ಜುಲೈ 2014, 19:30 IST
Last Updated 31 ಜುಲೈ 2014, 19:30 IST

ನವದೆಹಲಿ(ಪಿಟಿಐ): ದೇಶದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪೆನಿ ‘ಇನ್ಫೊಸಿಸ್‌’ ಆರಂಭಗೊಂಡ ಮೂರೂ ಕಾಲು ದಶಕಗಳ ನಂತರ ಇದೇ ಮೊದಲ ಬಾರಿಗೆ ಸಂಸ್ಥಾಪಕರಲ್ಲದ ಕಾರ್ಯನಿರ್ವ ಹಣಾಧಿಕಾರಿ ಕೈಗೆ ಅಧಿಕಾರ ಒಪ್ಪಿಸು ತ್ತಿದೆ. ವಿಶಾಲ್‌ ಸಿಕ್ಕಾ (47) ಶುಕ್ರವಾರ ಇನ್ಫೊಸಿಸ್‌ ‘ಸಿಇಒ’ ಹುದ್ದೆ ಸ್ವೀಕರಿಸುತ್ತಿದ್ದಾರೆ. ಇದೇ ವೇಳೆ, ಕಂಪೆನಿಯ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದ ಎಸ್.ಡಿ.ಶಿಬು ಲಾಲ್‌, ‘ಸಿಇಒ’ ಅಧಿಕಾರದ ಕೊನೆಯ ದಿನವನ್ನು ಗುರುವಾರ ಪೂರ್ಣಗೊಳಿಸಿ ಕಂಪೆನಿಗೆ ವಿದಾಯ ಹೇಳಿದರು.

ಎನ್‌.ಆರ್.ನಾರಾಯಣ ಮೂರ್ತಿ, ನಂದನ್‌ ನಿಲೇಕಣಿ, ಎಸ್‌.ಗೋಪಾಲ ಕೃಷ್ಣನ್‌, ಶಿಬುಲಾಲ್‌ ಸೇರಿದಂತೆ ಏಳು ಮಂದಿ ಸ್ನೇಹಿತರು 1981ರಲ್ಲಿ ಕೆಲವೇ ಸಾವಿರ ರೂಪಾಯಿ ಬಂಡವಾಳದಲ್ಲಿ ಇನ್ಫೊಸಿಸ್‌ ಆರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.