ADVERTISEMENT

ಇನ್ಫೋಸಿಸ್‌ ವೇತನ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ನವದೆಹಲಿ (ಪಿಟಿಐ): ಸಾಫ್ಟ್‌ವೇರ್‌ ಸೇವೆಗಳನ್ನು ಒದಗಿಸುವ ದೇಶದ ಎರಡನೇ ಅತಿದೊಡ್ಡ ಕಂಪೆನಿ ‘ಇನ್ಫೊಸಿಸ್‌’ 2015–16ರಲ್ಲಿ ದೇಶ ದಲ್ಲಿನ ಸಿಬ್ಬಂದಿಗೆ ಶೇ 6.5 ರಿಂದ ಶೇ 9ರವರೆಗೆ ವೇತನ ಹೆಚ್ಚಿಸಲು ನಿರ್ಧರಿಸಿದೆ.

ಬೆಂಗಳೂರು ಮೂಲದ ಕಂಪೆನಿಯು ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಹೊಸ ವೇತನ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಉತ್ತಮ ಪ್ರದರ್ಶನ ತೋರಿದವರಿಗೆ ಶೇ 9ರವರೆಗೂ ಮತ್ತು ಉಳಿದವರಿಗೆ ಶೇ 2 ರವರೆಗೂ ವೇತನ ಹೆಚ್ಚಳ ಮಾಡಲು ಕಂಪೆನಿ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ವಿಶಾಲ್‌ ಸಿಕ್ಕಾ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ವೇತನದಲ್ಲಿ ಹೆಚ್ಚಳ ಮಾಡಲಾಗುತ್ತಿದೆ.

ಕಳೆದ ಎರಡು ವರ್ಷಗಳಿಂದ ಕಂಪೆನಿ ಬಿಟ್ಟು ಹೋಗುತ್ತಿರುವ ಹಿರಿಯ ಸಿಬ್ಬಂದಿ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ತಡೆಯಲು ಡಿಸೆಂಬರ್‌ ತ್ರೈಮಾಸಿಕದಲ್ಲಿ  ಶೇ 100 ರಷ್ಟು ಬೋನಸ್‌ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.