ADVERTISEMENT

ಈರುಳ್ಳಿ ರಫ್ತು ಶೇ 56 ರಷ್ಟು ಹೆಚ್ಚಳ

ಪಿಟಿಐ
Published 18 ನವೆಂಬರ್ 2017, 19:30 IST
Last Updated 18 ನವೆಂಬರ್ 2017, 19:30 IST

ನವದೆಹಲಿ: ಪ್ರಸ್ತಕ ಸಾಲಿನ ಏಪ್ರಿಲ್‌–ಜುಲೈ ಅವಧಿಯಲ್ಲಿ 12.29 ಲಕ್ಷ ಟನ್‌ ಈರುಳ್ಳಿ ರಫ್ತಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತು  ಶೇ 56 ರಷ್ಟು ಹೆಚ್ಚಾಗಿದೆ. ಮೌಲ್ಯದ ಲೆಕ್ಕದಲ್ಲಿಯೂ ₹ 978 ಕೋಟಿಗಳಿಂದ ₹ 1,443 ಕೋಟಿಗಳಿಗೆ ಶೇ 48 ರಷ್ಟು ಏರಿಕೆ ಕಂಡಿದೆ.

ವಾಣಿಜ್ಯ ಬೇಹುಗಾರಿಕೆ ಮತ್ತು ಸಾಂಖ್ಯಿಕ ಇಲಾಖೆಯ ಮಹಾನಿರ್ದೇಶನಾಲಯ ಈ ಮಾಹಿತಿ ನೀಡಿದೆ.

ರಫ್ತು ಹೆಚ್ಚಾಗಲು ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೇಯದು, ಆ ಅವಧಿಯಲ್ಲಿ ಕನಿಷ್ಠ ರಫ್ತು ದರ ಇರಲಿಲ್ಲ. ಎರಡನೇಯದು ಜಾಗತಿಕ ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಗರಿಷ್ಠ ಮಟ್ಟದಲ್ಲಿ ಇತ್ತು ಎಂದು ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ (ಎನ್‌ಎಚ್‌ಆರ್‌ಡಿಎಫ್‌) ನಿರ್ದೇಶಕ ಪಿ.ಕೆ.ಗುಪ್ತಾ ಮಾಹಿತಿ ನೀಡಿದ್ದಾರೆ.‌

ADVERTISEMENT

ರಫ್ತು ಮಾಡಿದ್ದರಿಂದ ಮೊದಲ ತ್ರೈಮಾಸಿಕದಲ್ಲಿ ರೈತರಿಗೆ ಉತ್ತಮ ಬೆಲೆ ದೊರೆತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.