ADVERTISEMENT

ಎಟಿಎಂ: ಗುರಿ ತಲುಪದ ಸರ್ಕಾರಿ ಬ್ಯಾಂಕ್‌ಗಳು

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST
ಎಟಿಎಂ: ಗುರಿ ತಲುಪದ ಸರ್ಕಾರಿ ಬ್ಯಾಂಕ್‌ಗಳು
ಎಟಿಎಂ: ಗುರಿ ತಲುಪದ ಸರ್ಕಾರಿ ಬ್ಯಾಂಕ್‌ಗಳು   

ನವದೆಹಲಿ(ಪಿಟಿಐ): ಸರ್ಕಾರಿ ಸ್ವಾಮ್ಯದ 27 ಬ್ಯಾಂಕ್‌ಗಳು 2015–16ನೇ ಆರ್ಥಿಕ ವರ್ಷದಲ್ಲಿ ನಿರೀಕ್ಷಿಸಿದಷ್ಟು ಎಟಿಎಂ ತೆರೆಯುವಲ್ಲಿ ವಿಫಲವಾಗಿವೆ. ದೇಶದ ವಿವಿಧೆಡೆ ಒಟ್ಟು 15,249 ಎಟಿಎಂ ತೆರೆಯುವ ನಿರೀಕ್ಷೆ ಮಾಡಲಾಗಿತ್ತು.

ಆದರೆ 14 ಸಾವಿರ ಎಟಿಎಂಗಳನ್ನು ಮಾತ್ರ  ಸ್ಥಾಪಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಒಟ್ಟು ಎಟಿಎಂ ಸಂಖ್ಯೆ 1.43 ಲಕ್ಷಕ್ಕೆ ಏರಿಕೆಯಾಗಿದೆ. ಎಸ್‌ಬಿಐ, ಆಂಧ್ರ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಬ್ಯಾಂಕ್‌ ಆಫ್‌ ಇಂಡಿಯಾ, ಕೆನರಾ ಬ್ಯಾಂಕ್‌, ಇಂಡಿಯನ್‌ ಬ್ಯಾಂಕ್‌, ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್ ಮತ್ತು ವಿಜಯ ಬ್ಯಾಂಕ್‌ಗಳು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಎಟಿಎಂ ತೆರೆದಿವೆ.

ಇನ್ನೊಂದೆಡೆ, ಅಲಹಾಬಾದ್‌ ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮತ್ತು ಯೂನಿಯನ್‌ ಬ್ಯಾಂಕ್‌  ನಿರೀಕ್ಷಿಸಿದಷ್ಟು ಎಟಿಎಂ ತೆರೆಯುವಲ್ಲಿ ವಿಫಲವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.