ADVERTISEMENT

‘ಎನ್‌ಎಸ್‌ಇ’ಯಲ್ಲಿ 100ನೇ ‘ಎಸ್‌ಎಂಇ’ ವಹಿವಾಟು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ವಾಣಿಜ್ಯ ಸಚಿವ ಸುರೇಶ್‌ ಪ್ರಭು ಅವರು, ‘ಎನ್‌ಎಸ್‌ಇ’ಯಲ್ಲಿ 100ನೇ ‘ಎಸ್‌ಎಂಇ’ಯ ವಹಿವಾಟಿಗೆ ಚಾಲನೆ ನೀಡಿದ್ದಾರೆ. ರಾಷ್ಟ್ರೀಯ ಷೇರುಪೇಟೆಯ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಲಿಮಯೆ ಉಪಸ್ಥಿತರಿದ್ದರು
ವಾಣಿಜ್ಯ ಸಚಿವ ಸುರೇಶ್‌ ಪ್ರಭು ಅವರು, ‘ಎನ್‌ಎಸ್‌ಇ’ಯಲ್ಲಿ 100ನೇ ‘ಎಸ್‌ಎಂಇ’ಯ ವಹಿವಾಟಿಗೆ ಚಾಲನೆ ನೀಡಿದ್ದಾರೆ. ರಾಷ್ಟ್ರೀಯ ಷೇರುಪೇಟೆಯ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಲಿಮಯೆ ಉಪಸ್ಥಿತರಿದ್ದರು   

ಮುಂಬೈ: ರಾಷ್ಟ್ರೀಯ ಷೇರುಪೇಟೆಯಲ್ಲಿ (ಎನ್‍ಎಸ್‍ಇ) ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಸ್‌ಎಂಇ) ವಹಿವಾಟಿಗೆ ಒದಗಿಸಿರುವ ಪ್ರತ್ಯೇಕ ವ್ಯವಸ್ಥೆಯಲ್ಲಿ ಸೇರ್ಪಡೆಯಾಗಿರುವ ಉದ್ದಿಮೆಗಳ ಸಂಖ್ಯೆ ಈಗ 100ಕ್ಕೆ ತಲುಪಿದೆ.

ಗ್ರಾಹಕ ಉತ್ಪನ್ನ, ಜವಳಿ, ಔಷಧಿ, ರಸಗೊಬ್ಬರ, ಮಾಹಿತಿ ತಂತ್ರಜ್ಞಾನ ಮತ್ತು ಸೇವಾ ಕ್ಷೇತ್ರಗಳಿಗೆ ಸೇರಿದ ಈ ‘ಎಸ್‌ಎಂಇ’ಗಳು ಪಾಲು ಬಂಡವಾಳ ರೂಪದಲ್ಲಿ ₹ 1,400 ಕೋಟಿ ಸಂಗ್ರಹಿಸಿವೆ. ಎಎನ್‍ಐ ಇಂಟಗ್ರೇಟೆಡ್ ಸರ್ವೀಸಸ್ ಲಿಮಿಟೆಡ್ ಕಂಪನಿಯು ವಹಿವಾಟು ಆರಂಭಿಸಿದ ನೂರನೇ ಕಂಪನಿಯಾಗಿದೆ.

ವಾಣಿಜ್ಯ ಸಚಿವ ಸುರೇಶ್‌ ಪ್ರಭು ಅವರು, 100ನೇ ‘ಎಸ್‌ಎಂಇ’ಯ ವಹಿವಾಟಿಗೆ ಚಾಲನೆ ನೀಡಿದ್ದಾರೆ.

ADVERTISEMENT

‘ದೇಶಿ ಆರ್ಥಿಕತೆಯ ಬೆನ್ನೆಲುಬು ಆಗಿರುವ ಈ ವಲಯಕ್ಕೆ ಅಗತ್ಯ ಬೆಂಬಲ ನೀಡಿದರೆ ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಲಿದೆ’ ಎಂದು ಅವರು ಹೇಳೀದರು.

ಎನ್‍ಎಸ್‍ಇನ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಲಿಮಯೆ ಅವರುಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.