ADVERTISEMENT

ಎಸ್‌ಬಿಎಂ ಲಾಭ ಶೇ 26 ವೃದ್ಧಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ಬೆಂಗಳೂರು: ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು (ಎಸ್‌ಬಿಎಂ) ಪ್ರಸಕ್ತ ಹಣಕಾಸು ವರ್ಷದ 1ನೇ ತ್ರೈಮಾಸಿಕದಲ್ಲಿರೂ94.07 ಕೋಟಿ ನಿವ್ವಳ ಲಾಭ ಗಳಿಸುವ ಮೂಲಕ ಶೇ 26ರಷ್ಟು ಉತ್ತಮ ಸಾಧನೆ ತೋರಿದೆ. ಹಿಂದಿನ ಹಣಕಾಸು ವರ್ಷದ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಬ್ಯಾಂಕ್‌ನ ಲಾಭ ರೂ74.77 ಕೋಟಿಯಷ್ಟಿತ್ತು.

ನಗರದಲ್ಲಿನ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಶರದ್‌ ಶರ್ಮಾ ಅವರು, ಬಡ್ಡಿ ಮೂಲದ ವರಮಾನದಲ್ಲಿ ಶೇ 4.8ರಷ್ಟು (ರೂ1395.86 ಕೋಟಿಗೆ) ವೃದ್ಧಿ, ಸಾಲ ವಸೂಲಿ ಪ್ರಮಾಣ ಹೆಚ್ಚಳ ಹಾಗೂ ಹೊರೆ ಎನಿಸಿದ್ದ ದೊಡ್ಡ ಮೊತ್ತದ ಠೇವಣಿಗಳನ್ನು ಕಡಿಮೆ ಮಾಡಿಕೊಂಡಿದ್ದರಿಂದಾಗಿಯೇ ಈ ಬಾರಿ ಲಾಭ ಗಳಿಕೆಯಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಾಗಿದೆ ಎಂದು ವಿವರಿಸಿದರು.

ವಸೂಲಾಗದ ಸಾಲ (ಎನ್‌ಪಿಎ) ಪ್ರಮಾಣವೂ ತಗ್ಗಿದೆ. ಹಿಂದಿನ ವರ್ಷ ಶೇ 2.72ರಷ್ಟಿದ್ದ ನಿವ್ವಳ ಎನ್‌ಪಿಎ, 2015ರ ಜೂನ್‌ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ 2.10ಕ್ಕೆ (ರೂ1,282 ಕೋಟಿಯಿಂದರೂ1,077 ಕೋಟಿಗೆ) ಇಳಿಕೆಯಾಗಿದೆ  ಎಂದು ಅವರು ವಿವರಿಸಿದರು.

ಜೂನ್‌ 30ರ ವೇಳೆಗೆರೂ68,400 ಕೋಟಿ ಠೇವಣಿ ಸಂಗ್ರಹ,ರೂ52,600 ಕೋಟಿ ಸಾಲ ವಿತರಣೆ ಆಗಿದ್ದು, ಬ್ಯಾಂಕ್‌ ವಹಿವಾಟುರೂ1.21 ಲಕ್ಷ ಕೋಟಿ ಮುಟ್ಟಿದೆ ಎಂದರು.

ರೂ500 ಕೋಟಿ ಸಂಗ್ರಹ: ಅಗತ್ಯ ಬಂಡವಾಳ ಸಾಮರ್ಥ್ಯ ಅನುಪಾತ (ಸಿಎಆರ್‌) ಹೆಚ್ಚಿಸಿಕೊಳ್ಳಲು 3ನೇ ತ್ರೈಮಾಸಿಕದಲ್ಲಿ ಬಾಂಡ್‌ ವಿತರಿಸುವ ಮೂಲಕರೂ500 ಕೋಟಿ ಬಂಡವಾಳ ಸಂಗ್ರಹಿಸಲಾಗುವುದು ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.