ADVERTISEMENT

ಕಾಫಿ ರಫ್ತು ಶೇ7.59 ಇಳಿಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಬೆಲೆ ಇಳಿಕೆಯಾಗಿರು ವುದರಿಂದ ದೇಶದ ಕಾಫಿ ರಫ್ತು ಜುಲೈ ತಿಂಗಳಿನಲ್ಲಿ ಶೇ 7.59ರಷ್ಟು ತಗ್ಗಿದ್ದು, ₹42,240 ಕೋಟಿಗಳಿಗೆ ಇಳಿದಿದೆ. 2014ರ ಜುಲೈ ತಿಂಗಳಿನಲ್ಲಿ ದೇಶದ ಕಾಫಿ ರಫ್ತು ವಹಿವಾಟು ₹45,606 ಕೋಟಿಗಳಷ್ಟಿತ್ತು ಎಂದು ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ವಿಶ್ವದಲ್ಲೇ ಅತಿ ಹೆಚ್ಚು ಕಾಫಿ ಉತ್ಪಾದನೆ ಮಾಡುವ ಬ್ರೆಜಿಲ್‌ನಲ್ಲಿ ಈ ಬಾರಿ ಉತ್ಪಾದನೆ ಹೆಚ್ಚಾಗಿದೆ. ಇದರಿಂದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ ಎಂದು ವರ್ತಕರು ಹೇಳಿದ್ದಾರೆ. ಬ್ರೆಜಿಲ್‌ ಮತ್ತು ಕೀನ್ಯಾದಲ್ಲಿ ಕರೆನ್ಸಿ ಮೌಲ್ಯ ಕುಸಿಯುತ್ತಿರುವುದು ಭಾರತದ ಕಾಫಿ ರಫ್ತು ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಭಾರತದ ಕಾಫಿಗಿಂತಲೂ ಅವರ ಉತ್ಪನ್ನಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿವೆ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ ಪ್ರಧಾನ ನಿರ್ದೇಶಕ ಅಜಯ್‌ ಸಹಾಯ್‌ ಹೇಳಿದ್ದಾರೆ.

ಜರ್ಮನಿ, ಟರ್ಕಿ, ರಷ್ಯಾ ಮತ್ತು ಬೆಲ್ಜಿಯಂ ದೇಶಗಳು ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಆಮದು ಮಾಡಿಕೊಳ್ಳುತ್ತಿವೆ. ದೇಶದ ರಫ್ತು ವಹಿವಾಟು ಕಳೆದ ಎಂಟು ತಿಂಗಳಿನಿಂದಲೂ ಇಳಿಮುಖ ವಾಗಿದೆ. ಜುಲೈನಲ್ಲಿ ಶೇ 10ರಷ್ಟು ಕುಸಿದಿದೆ. ಇನ್ನೂ, ಸಂಬಾರ ಪದಾರ್ಥ,   ಎಣ್ಣೆಕಾಳುಗಳು, ಹಣ್ಣ ಮತ್ತು ತರಕಾರಿ ಗಳ ರಫ್ತು ಸಹ ಇಳಿಮುಖವಾಗೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.