ADVERTISEMENT

ಕಾರ್ಯತಂತ್ರ ಮರು ಪರಿಶೀಲನೆ: ಟಾಟಾ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ನವದೆಹಲಿ(ಪಿಟಿಐ): ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ (ಬ್ರೆಕ್ಸಿಟ್‌) ನಿರ್ಧಾರದಿಂದ   ಬ್ರಿಟನ್‌ನಲ್ಲಿರುವ ತನ್ನ 19 ಸ್ವತಂತ್ರ ಉದ್ಯಮಗಳ ಕಾರ್ಯತಂತ್ರವನ್ನು ಮರು ಪರಿಶೀಲಿಸುವುದಾಗಿ ಭಾರತದ ಪ್ರತಿಷ್ಠಿತ  ಟಾಟಾ ಸನ್ಸ್‌ ಕಂಪೆನಿ ಹೇಳಿದೆ.

ಭಾರತದ ಉದ್ಯಮಗಳು ಯುರೋಪ್‌ ಮತ್ತು ಬ್ರಿಟನ್‌ಗೆ ಸಂಬಂಧಿಸಿದಂತೆ ತಮ್ಮ ಕಾರ್ಯತಂತ್ರ ಮರು ರೂಪಿಸಿಕೊಳ್ಳುವ ಅಗತ್ಯವಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ(ಸಿಐಐ) ಅಧ್ಯಕ್ಷ ಡಾ. ನೌಷಾದ್‌ ಫೋಬ್ಸ್‌  ಅವರು  ಸಲಹೆ ಮಾಡಿದ್ದಾರೆ.

ಬ್ರಿಟನ್‌, ಭಾರತದ ಅತಿ ದೊಡ್ಡ ಮಾರುಕಟ್ಟೆಯಾಗಿದ್ದು ಬ್ರೆಕ್ಸಿಟ್‌ ಬೆಳವಣಿಗೆ ಖಂಡಿತ ಭಾರತದ ರಫ್ತು ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಸಿದ್ಧ ಉಡುಪು ರಫ್ತು ಉತ್ತೇಜನಾ ಮಂಡಳಿ ಅಧ್ಯಕ್ಷ ಅಶೋಕ್‌ ಜಿ. ರಜನಿ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.