ADVERTISEMENT

ಕೆ.ಜಿ. ಟೊಮೆಟೊಗೆ ₹7 ಬೆಂಬಲ ಬೆಲೆ

ಬಿಗ್‌ಬಾಸ್ಕೆಟ್‌ ಡಾಟ್‌ ಕಾಮ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2016, 19:30 IST
Last Updated 26 ಆಗಸ್ಟ್ 2016, 19:30 IST
ಕೆ.ಜಿ. ಟೊಮೆಟೊಗೆ ₹7 ಬೆಂಬಲ ಬೆಲೆ
ಕೆ.ಜಿ. ಟೊಮೆಟೊಗೆ ₹7 ಬೆಂಬಲ ಬೆಲೆ   

ಬೆಂಗಳೂರು: ಟೊಮೆಟೊ ಬೆಲೆ ಕುಸಿತದಿಂದಾಗಿ ಕಂಗೆಟ್ಟಿರುವ ರೈತರ ನೆರವಿಗೆ ಧಾವಿಸುವ ಉದ್ದೇಶದಿಂದ ಆನ್‌ಲೈನ್‌ ಮಾರ್ಕೆಟ್‌ ‘ಬಿಗ್‌ಬಾಸ್ಕೆಟ್‌ ಡಾಟ್‌ ಕಾಮ್‌’   ಕೆ.ಜಿ. ಟೊಮೆಟೊಗೆ  ₹ 7 ಬೆಂಬಲ ಬೆಲೆ ಘೋಷಿಸಿದೆ.

ಟೊಮೆಟೊ ಬೆಳೆಯುವ ಪ್ರದೇಶಗಳಾದ ಕೋಲಾರ, ಮಾಲೂರು, ಚಿಕ್ಕಬಳ್ಳಾಪುರ ಮೊದಲಾದ ಕಡೆಗಳಲ್ಲಿ ಬಂಪರ್ ಬೆಳೆ ಬಂದಿರುವ ಕಾರಣ ಬೆಂಗಳೂರಿನಲ್ಲಿ ಟೊಮೆಟೊ ಆವಕ ಹೆಚ್ಚಾಗಿದೆ.

ಹೀಗಾಗಿ ಕೆ.ಜಿ. ಟೊಮೆಟೊಗೆ ₹5 ಬೆಲೆ ಇದೆ. ಆದರೆ, ಒಂದು ಕೆ.ಜಿ ಟೊಮೆಟೊ ಬೆಳೆಯಲು ಸುಮಾರು ₹5 ಖರ್ಚು ಮಾಡಬೇಕಿದೆ. ಹೀಗಾಗಿ ಬಿಗ್‌ಬಾಸ್ಕೆಟ್‌ ಡಾಟ್‌ ಕಾಮ್‌ ರೈತರಿಂದ ಕೆ.ಜಿ. ಟೊಮೆಟೊವನ್ನು ₹7ಕ್ಕೆ ಖರೀದಿಸಿ ಗ್ರಾಹಕರಿಗೆ ₹7ಕ್ಕೆ ಮಾರಾಟ ಮಾಡಲಿದೆ ಎಂದು ಸಂಸ್ಥೆಯ  ರಾಷ್ಟ್ರೀಯ ಮುಖ್ಯಸ್ಥ ವಿಪುಲ್ ಮಿತ್ತಲ್ ತಿಳಿಸಿದ್ದಾರೆ.

‘ಈಚೆಗೆ ರೈತರೊಂದಿಗೆ ಸಂಪರ್ಕ ಎಂಬ ಕಾರ್ಯಕ್ರಮ ಆರಂಭಿಸಿದ್ದು, ಇದರಿಂದ ರೈತರಿಗೆ ಶೇ 10–15 ರಷ್ಟು ಆದಾಯ ವೃದ್ಧಿಯಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಸ್ವೀಕೃತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಇವುಗಳ ಮೂಲಕವೇ ಶೇ 60 ರಷ್ಟು ಹಣ್ಣು, ತರಕಾರಿಗಳನ್ನು ರೈತರಿಂದ ಪಡೆಯುತ್ತೇವೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಿದಂತಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.