ADVERTISEMENT

ಚಾಲ್ತಿ ಖಾತೆ ಕೊರತೆ ಹೆಚ್ಚಳ ಸಾಧ್ಯತೆ

ಪಿಟಿಐ
Published 19 ಮಾರ್ಚ್ 2018, 19:58 IST
Last Updated 19 ಮಾರ್ಚ್ 2018, 19:58 IST

ನವದೆಹಲಿ: ಕಚ್ಚಾ ತೈಲ ಬೆಲೆ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಾಲ್ತಿ ಖಾತೆ ಕೊರತೆ ಹೆಚ್ಚಾಗಲಿದೆ ಎಂದು ಜಾಗತಿಕ ಹಣಕಾಸು ಸೇವಾ ಸಂಸ್ಥೆ ಬ್ಯಾಂಕ್‌ ಆಫ್‌ ಅಮೆರಿಕ ಮೆರಿಲ್‌ ಲಿಂಚ್‌ ಹೇಳಿದೆ.

ಡಿಸೆಂಬರ್‌ ತ್ರೈಮಾಸಿಕದಲ್ಲಿ ಇದು ಜಿಡಿಪಿಯ ಶೇ 2 ಕ್ಕೆ ಏರಿಕೆ ಕಂಡಿತ್ತು. ವ್ಯಾಪಾರ ಕೊರತೆ ಅಂತರ ಹೆಚ್ಚಾಗಿರುವುದರಿಂದ ಚಾಲ್ತಿ ಖಾತೆ ಕೊರತೆ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಾಲ್ತಿ ಖಾತೆ ಕೊರತೆಯು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 1.7 ರಷ್ಟಿರಲಿದೆ. 2018–19ನೇ ಆರ್ಥಿಕ ವರ್ಷದಲ್ಲಿ ಶೇ 1.9ಕ್ಕೆ ಏರಿಕೆ ಕಾಣಲಿದೆ ಎಂದು ಅಂದಾಜು ಮಾಡಿದೆ.

ADVERTISEMENT

ವರಮಾನ ಮತ್ತು ವೆಚ್ಚದ ಮೇಲೆ ಮೂರು ಸಂಗತಿಗಳು ಪ್ರಭಾವ ಬೀರುತ್ತಿವೆ. ಮೊದಲನೆಯದು ಕಚ್ಚಾ ತೈಲ ಬೆಲೆ. ಎರಡನೆಯದು ಚಾಲ್ತಿ ಖಾತೆ ಕೊರತೆ ಮತ್ತು ಮೂರನೆಯದು ಷೇರುಪೇಟೆಯಲ್ಲಿ ವಿದೇಶಿ ಹೂಡಿಕೆ ಪ್ರಮಾಣ ಎಂದು ತಿಳಿಸಲಾಗಿದೆ.

ಫೆಬ್ರುವರಿ ತಿಂಗಳಿನಲ್ಲಿ ವ್ಯಾಪಾರ ಕೊರತೆ ಅಂತರ ₹ 1.05 ಲಕ್ಷ ಕೋಟಿಯಿಂದ ₹ 78,000 ಕೋಟಿಗಳಿಗೆ ಇಳಿಕೆ ಕಂಡಿದೆ. ಹೀಗಾಗಿ ಮಾರ್ಚ್ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಕೊರತೆ ₹ 45,500 ಕೋಟಿಗೆ ಇಳಿಕೆ ಕಾಣಲಿದೆ ಎಂದೂ ಸಂಸ್ಥೆಯು ನಿರೀಕ್ಷೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.