ADVERTISEMENT

ಚಿನ್ನದ ಸಾಲಕ್ಕೆ ರೂಪೀಕ್ ಆ್ಯಪ್

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST
ರೂಪೀಕ್‌ ಆ್ಯಪ್‌
ರೂಪೀಕ್‌ ಆ್ಯಪ್‌   

ಬೆಂಗಳೂರಿನ ಹಣಕಾಸು ತಂತ್ರಜ್ಞಾನ ಸಂಸ್ಥೆ ರೂಪೀಕ್  30 ನಿಮಿಷಗಳಲ್ಲಿ  ಆನ್‍ಲೈನ್ ಮೂಲಕ ಚಿನ್ನದ ಮೇಲೆ ಸಾಲ ಪಡೆಯುವ ಆ್ಯಪ್  ಬಿಡುಗಡೆ ಮಾಡಿದೆ.ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ ಸೌಲಭ್ಯ ನೀಡುವ ದೃಷ್ಟಿಯಿಂದ 2015 ರಲ್ಲಿ ರೂಪೀಕ್ ಆರಂಭಿಸಲಾಗಿತ್ತು.

‘ರೂಪೀಕ್‍ನಲ್ಲಿ ಅತ್ಯಂತ ಸುಲಭವಾಗಿ ಚಿನ್ನದ ಮೇಲಿನ ಸಾಲವನ್ನು ಪಡೆಯಬಹುದಾಗಿದೆ. ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ಈ ಆ್ಯಪ್    ಇನ್‍ಸ್ಟಾಲ್ ಮಾಡಿಕೊಂಡು ಸಾಲಕ್ಕಾಗಿ ಮನವಿ ಸಲ್ಲಿಸಬಹುದು’ ಎಂದು ಸಂಸ್ಥೆಯ ಸಂಸ್ಥಾಪಕ ಸುಮೀತ್ ಮಣಿಯಾರ್ ಹೇಳಿದ್ದಾರೆ.  ‘ಚಿನ್ನದ ಮೇಲೆ ಸಾಲ ನೀಡುವ ಕಂಪನಿಗಳಿಗೆ ಹೋಲಿಸಿದರೆ ಈ ಆ್ಯಪ್‌ನಲ್ಲಿನ ಚಿನ್ನದ ಮೇಲಿನ ಸಾಲ ಯೋಜನೆಗಳು ಶೇ 25 ರಷ್ಟು ಕಡಿಮೆ ದರ ಹೊಂದಿವೆ’ ಎಂದು ಅವರು ತಿಳಿಸಿದ್ದಾರೆ.

ಚಿನ್ನದ ಮೇಲಿನ ಸಾಲ ಯೋಜನೆಯಲ್ಲಿ ತಿಂಗಳಿಗೆ ಬಡ್ಡಿ ದರ ಶೇ 1.5 ರಷ್ಟಿರುತ್ತದೆ ಮತ್ತು 12 ತಿಂಗಳ ಅವಧಿಯದ್ದಾಗಿರುತ್ತದೆ.  ಬಡ್ಡಿ ದರದಲ್ಲಿ ಕಾಲಕಾಲಕ್ಕೆ ಹೆಚ್ಚಳ ಇರುವುದಿಲ್ಲ. ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಬಡ್ಡಿ ನೀಡುವ ಅವಕಾಶವೂ ಇದೆ. ಸಾಲವನ್ನು ಹಿಂತಿರುಗಿಸಿದ ತಕ್ಷಣಕ್ಕೆ ಚಿನ್ನವನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

ADVERTISEMENT

ಆಧಾರ್ ಜೋಡಣೆ ಆಧಾರದಲ್ಲಿ ಎಲ್ಲಾ ಪ್ರಕ್ರಿಯೆಗಳು ಕಾಗದ ರಹಿತವಾಗಿ ಮತ್ತು ಅತ್ಯಂತ ವೇಗವಾಗಿ ನಡೆಯುತ್ತವೆ. ಈ ಮೂಲಕ ಗ್ರಾಹಕರ ಸಮಯದ ಉಳಿತಾಯವಾಗುತ್ತದೆ. ತ್ರಿಶೂರ್‍ನ ಯೋಗಕ್ಷೇಮಂ ಲೋನ್ಸ್ ಕಂಪನಿ ಜತೆಗೆ ರೂಪೀಕ್ ಪಾಲುದಾರಿಕೆ ಹೊಂದಿದೆ. ಈ ಸೇವೆ ಈಗ ಬೆಂಗಳೂರಿನಲ್ಲೂ ಲಭ್ಯವಿದೆ.  ಮಾಹಿತಿಗೆ  080: 39515252 ಸಂಪರ್ಕಿಸಿ.

ಪೇಟಿಎಂ ಮೆಸೇಜಿಂಗ್‌ ಸೇವೆ
ಚೀನಾ ಮೂಲದ ಅಲಿಬಾಬಾ ಒಡೆತನದ ಪೇಟಿಎಂ ಇದೀಗ ವಾಟ್ಸ್‌ಆ್ಯಪ್‌ ಮಾದರಿಯಲ್ಲಿ ಮೆಸೇಜಿಂಗ್‌ ಸೇವೆ ನೀಡುವುದಾಗಿ ಪ್ರಕಟಿಸಿದೆ. ಪೇಟಿಎಂ ವಾಲೆಟ್‌ ಗ್ರಾಹಕರು ಬ್ಯಾಂಕಿಂಗ್‌, ಹಣಕಾಸು ವ್ಯವಹಾರ ನಡೆಸುವುದರ ಜತೆಗೆ ವಾಟ್ಸ್‌ಆ್ಯಪ್‌ ಮಾದರಿಯಲ್ಲಿ ಚಾಟಿಂಗ್‌ ಸೇರಿದಂತೆ ವಿಡಿಯೊ, ಆಡಿಯೊ ಮತ್ತು ಚಿತ್ರಗಳನ್ನು ತಮ್ಮ ಗೆಳೆಯರಿಗೆ, ಸಂಬಂಧಿಗಳಿಗೆ ರವಾನಿಸಬಹುದು.

ಈ ನೂತನ ವೈಶಿಷ್ಟ್ಯವನ್ನು ಜಪಾನಿನ ಸಾಫ್ಟ್‌ಬ್ಯಾಂಕ್‌ ಕಂಪೆನಿಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪೇಟಿಎಂ ವಾಲೆಟ್‌ ತಿಳಿಸಿದೆ. ಈ ಮೆಸೇಜಿಂಗ್‌ ವೈಶಿಷ್ಟ್ಯಕ್ಕೆ ಇನ್ನು ಹೆಸರಿಡಲಾಗಿಲ್ಲ. ಈ ತಿಂಗಳ ಅಂತ್ಯದಲ್ಲಿ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ.

ಡ್ರೈವರ್‌ ಸ್ಮಾರ್ಟ್‌ಲೈಟ್‌ ಆ್ಯಪ್‌
ಬಜಾಜ್‌ ಅಲೈಯನ್ಸ್‌ ಇನ್ಶುರನ್ಸ್‌ ಕಂಪೆನಿಯು ಚಾಲಕರಿಗಾಗಿ ವಿಶೇಷ ‘ಡ್ರೈವರ್‌ ಸ್ಮಾರ್ಟ್‌ಲೈಟ್‌‘ ಆ್ಯಪ್‌  ಅಭಿವೃದ್ಧಿಪಡಿಸಿದೆ. ಚಾಲಕರು ಹಾಗೂ ಕಾರಿನ ಮಾಲೀಕರು ಕಾರಿನ ದಾಖಲೆಗಳು ಸೇರಿದಂತೆ ಅದರ ಕಾರ್ಯಕ್ಷಮತೆಯ ಮಾಹಿತಿಯನ್ನು ಈ ಆ್ಯಪ್ ಮೂಲಕ ಪಡೆಯಬಹುದು. ಕಾರಿನ ವೇಗ, ಇಂಧನ ಕ್ಷಮತೆ, ಕಿಲೊಮೀಟರ್‌, ಎಂಜಿನ್‌ ದಕ್ಷತೆ, ಆಯಿಲ್‌ ಬದಲಾವಣೆಯ ಮಾಹಿತಿ ಬಳಕೆದಾರರ ಬೆರಳ ತುದಿಯಲ್ಲೇ ಲಭ್ಯವಾಗಲಿದೆ. ಈ ಆ್ಯಪ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಮಾದರಿಯಲ್ಲಿ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.