ADVERTISEMENT

ಜಿಯೊ ಡಿಜಿಟಲ್‌ಗೆ ‘ಜಿಯೊಫಿ’ ರಹದಾರಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2016, 19:30 IST
Last Updated 27 ಡಿಸೆಂಬರ್ 2016, 19:30 IST
ಜಿಯೊ ಡಿಜಿಟಲ್‌ಗೆ    ‘ಜಿಯೊಫಿ’ ರಹದಾರಿ
ಜಿಯೊ ಡಿಜಿಟಲ್‌ಗೆ ‘ಜಿಯೊಫಿ’ ರಹದಾರಿ   

2ಜಿ ಮತ್ತು 3 ಜಿ ಸ್ಮಾರ್ಟ್‌ಫೋನ್‌ಗಳಲ್ಲಿ ಈಗ ಜಿಯೊ ಡಿಜಿಟಲ್‌ ಲೈಫ್‌ ಸೇವೆಗಳನ್ನು ಪಡೆದುಕೊಳ್ಳಬಹುದು. ಗರಿಷ್ಠ ವೇಗದ ನಿಸ್ತಂತು ಸಂಪರ್ಕ ಹೊಂದಿಲ್ಲದ (ವಿಒ–ಎಲ್‌ಟಿಇ) ಮೊಬೈಲ್‌ಗಳಲ್ಲಿ ಕೂಡ, ಜಿಯೊ 4ಜಿ ವಾಯಿಸ್‌ ಅಪ್ಲಿಕೇಷನ್‌ (JioFi + Jio4GVoice app) ಇನ್‌ಸ್ಟಾಲ್‌ ಮಾಡಿಕೊಳ್ಳುವ ಮೂಲಕ ತ್ವರಿತ ವೇಗದ ಇಂಟರ್‌ನೆಟ್‌ ಸೇವೆಗಳನ್ನು ಪಡೆಯಬಹುದು.

ಜಿಯೊ ಕಂಪೆನಿಯ 4ಜಿ ಪೊರ್ಟೆಬಲ್‌ ವಾಯಿಸ್‌ ಮತ್ತು ಡೇಟಾ ಡಿವೈಸ್‌ ‘ಜಿಯೊಫೈ’ ಸದ್ಯ ಎಲ್ಲ ಬಹುಬ್ರ್ಯಾಂಡ್‌ ಮಳಿಗೆಗಳಲ್ಲಿ ಲಭ್ಯವಿದೆ.  ಇತರೆ ಡೋಂಗಲ್‌ ಮತ್ತು ಹಾಟ್‌ಸ್ಟಾಟ್‌ಗಳಿಗಿಂತಲೂ ಇದು ಭಿನ್ನವಾಗಿದೆ. ಕೇವಲ ಇಂಟರ್‌ನೆಟ್‌ ಸೇವೆಯನ್ನಷ್ಟೇ ಅಲ್ಲದೆ, ವಿಡಿಯೊ ಕಾಲಿಂಗ್‌ನ ಅನನ್ಯ ಅನುಭವನ್ನೂ ನೀಡಲಿದೆ.
ಹೀಗಾಗಿ ಇದನ್ನು ‘ಜಿಯೊ ಡಿಜಿಟಲ್‌ಲೈಪ್‌’ ಸೇವೆಗಳಿಗೆ ಜನಸಾಮಾನ್ಯರ ಪಾಸ್‌ಪೋರ್ಟ್‌ ಎಂದು ಕಂಪೆನಿ ವಿಶ್ಲೇಷಿಸಿದೆ.   

‘ಜಿಯೊಫೈ ಡಿವೈಸ್‌ಗಳು ಸಮೀಪದ ರಿಟೇಲ್‌ ಮಳಿಗೆಯಲ್ಲಿ ಲಭಿಸುತ್ತವೆ. ರಿಲಯನ್ಸ್‌ ಕಂಪೆನಿಯ ಅಜಿಯೊ ಡಾಟ್‌ ಕಾಂ ಸೇರಿದಂತೆ ಇತರೆ ಇ–ಕಾಮರ್ಸ್‌ ತಾಣಗಳಿಂದಲೂ ಇದನ್ನು ಖರೀದಿಸಬಹುದು.

ಈ ಡಿವೈಸ್‌ ಜತೆಗೆ ಜಿಯೊ ಸಿಮ್‌ ಕೂಡ ಇರುತ್ತದೆ. ಒಮ್ಮೆ ಸಿಮ್‌ ಚಾಲನೆಗೊಂಡ ನಂತರ ಹಾಟ್‌ಸ್ಪಾಟ್‌ ನೆರವಿನಿಂದ ಒಂದಕ್ಕಿಂತ ಹೆಚ್ಚು ಡಿವೈಸ್‌ಗಳ ಜತೆಗೆ ಇಂಟರ್‌ನೆಟ್‌ ಸಂಪರ್ಕ ಬೆಸೆಯಬಹುದು. ಕುಟುಂಬ ಸದಸ್ಯರು ಎಲ್ಲರಿಗೂ ಅಥವಾ ಚಿಕ್ಕ ಉದ್ಯಮ, ಕಂಪೆನಿಯ ಸರ್ವ ಸಿಬ್ಬಂದಿ ಏಕಕಾಲದಲ್ಲಿ ಇದರಿಂದ ಇಂಟರ್‌ನೆಟ್‌ ಸೇವೆ ಪಡೆಯಬಹುದು.

ಜಿಯೊಫೈ ಡಿವೈಸ್‌ನಿಂದ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಸೇರಿದಂತೆ ವೈಫೈ ಸಂಪರ್ಕ ಹೊಂದಿರುವ 10 ಡಿವೈಸ್‌ಗಳ ಜತೆಗೆ ಇಂಟರ್‌ನೆಟ್‌ ಸಂಪರ್ಕ ಬೆಸೆಯಬಹುದು. ಗರಿಷ್ಠ ಎಂದರೆ 32 ಡಿವೈಸ್‌ಗಳ ಜತೆಗೆ ಇದನ್ನು ಬೆಳೆಸಿ ಅಂತರ್ಜಾಲ ಸಂಪರ್ಕ ಪಡೆಯಬಹುದು.

ವಾಯಿಸ್‌ ಕಾಲ್‌ ಸೌಲಭ್ಯ ಪಡೆಯಲು 2ಜಿ ಮತ್ತು 3ಜಿ ಸ್ಮಾರ್ಟ್‌ಫೋನ್‌ ಬಳಕೆದಾರರು ಪ್ಲೇ ಸ್ಟೋರ್‌ನಿಂದ ಜಿಯೊ4ಜಿ ವಾಯಿಸ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು.

ಜಿಯೊ 4ಜಿ ವಾಯ್ಸ್ ಅನ್ನು ಡಿಫಾಲ್ಟ್ ಕರೆ ಆಯ್ಕೆಯನ್ನಾಗಿ ಮಾಡಿಕೊಂಡರೆ ಹೈ ಸ್ಪೀಡ್ ಇಂಟರ್ನೆಟ್, ಅನಿಯಮಿತ ಧ್ವನಿ ಕರೆಗಳು ಮತ್ತು ಎಸ್‌ಎಂಎಸ್‌ ಸೌಲಭ್ಯ ಪಡೆಯಬಹುದು.

ಮೊಬೈಲ್‌ನಲ್ಲಿ ಎಸ್‍ಎಂಎಸ್ ಅನುಭವವು ಅಕ್ಷರ ಮತ್ತು ಭಾವನಾತ್ಮಕ ಚಿಹ್ನೆಗಳ ಆಚೆಗೆ ಇನ್ನೂ ಬದಲಾಗಿಲ್ಲ. ಈ ಸಾಂಪ್ರದಾಯಿಕ ವಿಧಾನವನ್ನು ಬದಲಿಸಿ, ಗುಂಪು ಹರಟೆ, ಫೈಲ್‌ಷೇರಿಂಗ್‌, ಇಮೇಜ್‌ ಷೇರಿಂಗ್‌ ಸೇರಿದಂತೆ ಲೊಕೇಶನ್‌ ಆಧಾರಿತ ಹಲವು ಮೋಜಿನ ಅನುಭವಗಳನ್ನು ಜಿಯೊ ಆ್ಯಪ್‌ ನೀಡಲಿದೆ.

ಬಳಕೆದಾರರು ಎಸ್‌ಎಂಎಸ್‌ ಕಳುಹಿಸುವಾಗ ತಾವಿರುವ ಪ್ರದೇಶದ ಮಾಹಿತಿ, ಜತೆಗೆ ಚಿತ್ರವನ್ನೂ ಸಂದೇಶದ ಜತೆಗೆ ಕಳುಹಿಸಬಹುದು. ಉದಾಹರಣೆಗೆ ನಿಮ್ಮ ತಾಯಿಯ ಕರೆ ಸ್ವೀಕರಿಸುವಾಗ ನೀವು ಯಾವುದೋ ಕಾರ್ಯಕ್ರಮದಲ್ಲಿ ಇರುತ್ತೀರಿ. ಆಕೆಯಿಂದ ಬಂದಿರುವುದು ತುರ್ತು ಕರೆ ಎಂಬುದನ್ನು ತಿಳಿಯದೆ, ಮಾಮೂಲಿ ಅಭ್ಯಾಸದಂತೆ ನೀವು ಕರೆಯನ್ನು ಸೈಲೆನ್ಸ್  ಆಯ್ಕೆಯಲ್ಲಿ ಇಡುತ್ತೀರಿ. ಇದರ ಬದಲು, ಮಗು  ಇದು ತುರ್ತು ಕರೆ!' ಎಂಬ ಸಂದೇಶ ನಿಮ್ಮ ಸ್ಕ್ರೀನ್ ಮೇಲೆ ಫ್ಲಾಷ್‌ ಆಗುತ್ತಾ ಕರೆ ಬಂದರೆ ಹೇಗಿರುತ್ತದೆ? ಅಥವಾ ತುರ್ತು ಕರೆ ಚಿತ್ರದೊಂದಿಗೆ ಕರೆ ಬಂದರೆ ಹೇಗಿರುತ್ತದೆ? ಇದು  ಜಿಯೋಫೈನಲ್ಲಿ ಸಾಧ್ಯವಿದೆ ಎನ್ನುವುದು ಕಂಪೆನಿಯ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT