ADVERTISEMENT

ಜಿಯೊ ಫೋನ್‌ ಇಂದಿನಿಂದ ಮುಂಗಡ ಬುಕಿಂಗ್‌

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2017, 6:41 IST
Last Updated 24 ಆಗಸ್ಟ್ 2017, 6:41 IST
ಜಿಯೊ ಫೋನ್‌ ಇಂದಿನಿಂದ ಮುಂಗಡ ಬುಕಿಂಗ್‌
ಜಿಯೊ ಫೋನ್‌ ಇಂದಿನಿಂದ ಮುಂಗಡ ಬುಕಿಂಗ್‌   

ಮುಂಬೈ: ರಿಲಯನ್ಸ್‌ ಜಿಯೊ ಪರಿಚಯಿಸಲಿರುವ ₹ 1,500 ಬೆಲೆಯ ಸ್ಮಾರ್ಟ್‌ಫೋನ್‌ ಜಿಯೊಫೋನ್‌ ಮುಂಗಡ ಬುಕಿಂಗ್‌ ಗುರುವಾರದಿಂದ ಆರಂಭಗೊಳ್ಳಲಿದೆ.

ಸಂಜೆ 5 ಗಂಟೆಯಿಂದ ರಿಟೇಲ್‌ ಮಳಿಗೆ, ಅಂತರ್ಜಾಲ ತಾಣ ಮತ್ತು ಜಿಯೊ ಆ್ಯಪ್‌ನಲ್ಲಿ ₹ 500 ಪಾವತಿಸಿ ಮುಂಗಡ ಕಾದಿರಿಸಬಹುದು. ಸೆಪ್ಟೆಂಬರ್‌ನಲ್ಲಿ ಮೊಬೈಲ್‌ ವಿತರಿಸುವಾಗ ಉಳಿಕೆ ₹ 1,000 ಪಾವತಿಸಬೇಕು.

ಮೂರು ವರ್ಷಗಳ ನಂತರ ಗ್ರಾಹಕರು ಈ ಫೋನ್‌ ಮರಳಿಸಿದರೆ ₹ 1,500 ಮರಳಿಸುವ ಸೌಲಭ್ಯ ಇರಲಿದೆ. ತಿಂಗಳಿಗೆ ₹ 153 ಪಾವತಿಸಿದರೆ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯ ಇದರ ವಿಶೇಷತೆಗಳಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.