ADVERTISEMENT

ಜಿಯೊ ಫೋನ್‌: ಟಿವಿಯೊಂದಿಗೂ ಸಂಪರ್ಕ ಸಾಧ್ಯ

ಏಜೆನ್ಸೀಸ್
Published 23 ಸೆಪ್ಟೆಂಬರ್ 2017, 6:59 IST
Last Updated 23 ಸೆಪ್ಟೆಂಬರ್ 2017, 6:59 IST
ಜಿಯೊ ಫೋನ್‌: ಟಿವಿಯೊಂದಿಗೂ ಸಂಪರ್ಕ ಸಾಧ್ಯ
ಜಿಯೊ ಫೋನ್‌: ಟಿವಿಯೊಂದಿಗೂ ಸಂಪರ್ಕ ಸಾಧ್ಯ   

ಬೆಂಗಳೂರು: ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಜಿಯೊ ಫೋನ್‌ನಲ್ಲಿ ಏನೆಲ್ಲ ಆಯ್ಕೆಗಳಿವೆ ಹಾಗೂ ಇಂಟರ್ನೆಟ್‌ ಬಳಕೆಗೆ ಎಷ್ಟು ಸಹಕಾರಿ?

ರಿಲಯನ್ಸ್‌ ಕಡಿಮೆ ದರದಲ್ಲಿ 4ಜಿ ಫೋನ್‌ ಪ್ರಕಟಸಿದ ನಂತರ ಜಿಯೊ ಫೋನ್‌ ಹೊಂದಿರುವ ಲಕ್ಷಣಗಳು ಕುರಿತು ಸಾಕಷ್ಟು ಚರ್ಚೆ ಆರಂಭವಾಗಿತ್ತು. ಈಗಾಗಲೇ ಅನೇಕರು ಹೊಸ ಫೋನ್‌ಗಾಗಿ ಬುಕ್ಕಿಂಗ್‌ ಮಾಡಿದ್ದು, ಕೆಲವರು ಬಳಕೆಯನ್ನೂ ಪ್ರಾರಂಭಿಸಿದ್ದಾರೆ.

2.4 ಇಂಚು ಕ್ಯುವಿಜಿಎ ಪರದೆ ಹೊಂದಿದ್ದು, ಬೇಸಿಕ್‌ ಹ್ಯಾಂಡ್‌ಸೆಟ್‌ಗಿಂತಲೂ ಉತ್ತಮ ಡಿಸ್‌ಪ್ಲೇ ಕಾಣಬಹುದು. 4ಜಿ ಇಂಟರ್ನೆಟ್‌ ಡಾಟಾ ಬಳಕೆಗೆ ಸಹಕಾರಿಯಾಗಿದ್ದು, ಹುಡುಕಿ ಮಾಹಿತಿ ಪಡೆಯುವುದು ಹಾಗೂ ವೀಕ್ಷಣಾ ಪ್ರಕ್ರಿಯೆ ತ್ವರಿವಾಗಿ ಆಗಲು ಡ್ಯುಯಲ್‌–ಕೋರ್‌ ಚಿಪ್‌ನೊಂದಿಗೆ 512 ಎಂಬಿ ರ್ಯಾಮ್‌ ಒಳಗೊಂಡಿದೆ.

ADVERTISEMENT

4 ಜಿಬಿ ಇಂಟರ್ನಲ್‌ ಮೆಮೊರಿಯೊಂದಿಗೆ ಇದನ್ನು ವಿಸ್ತರಿಸಿಕೊಳ್ಳುವ ಆಯ್ಕೆಯೂ ಇದೆ. 2 ಮೆಗಾಪಿಕ್ಸೆಲ್‌ ಹಿಂದಿನ ಕ್ಯಾಮೆರಾ ಹಾಗೂ ಸೆಲ್ಫಿ ಪಡೆಯಲು 0.3 ಎಂಪಿ ಕ್ಯಾಮೆರಾ ಕೂಡ ಹೊಂದಿದೆ. 2000 ಎಂಎಎಚ್‌ ಬ್ಯಾಟರಿ ಒಳಗೊಂಡಿರುವ ಫೋನ್‌ನಿಂದ ವಿಡಿಯೋ ಕಾಲ್‌ ಹಾಗೂ ವೈಫೈ ಸಂಪರ್ಕ ಸಹ ಸಾಧ್ಯ.

ಜಿಯೊ ಮೀಡಿಯಾ: ಬಹುತೇಕ ಜಿಯೊ ಆ್ಯಪ್‌ಗಳನ್ನು ಫೋನ್‌ ಹೊಂದಿದೆ. ಜಿಯೊ ಮೀಡಿಯಾ ಕೇಬಲ್‌ ಬಳಸಿ ಫೋನ್‌ನಲ್ಲಿ ಇರುವ ಆಡಿಯೊ/ವಿಡಿಯೊ ಮಾಹಿತಿಯನ್ನು ಟಿವಿಯಲ್ಲಿ ವೀಕ್ಷಿಸಬಹುದು.

ಸಮೀಪದ ಸಾಧನಗಳೊಂದಿಗೆ ಸಂಪರ್ಕಿಸುವ ಎನ್‌ಎಫ್‌ಸಿ ತಂತ್ರಜ್ಞಾನ, ಧ್ವನಿ ಮೂಲಕ ಮಾಹಿತಿ ಹುಡುಕಾಟ, ಬ್ಲುಟ್ಯೂತ್‌, ಎಫ್‌ಎಂ ರೇಡಿಯೊ, ಹಾಗೂ ಟಾರ್ಚ್‌ ಆಯ್ಕೆಗಳನ್ನು ಹೊಂದಿದೆ. ಆಗಸ್ಟ್‌ 24ರಿಂದ ಪ್ರೀ–ಬುಕ್ಕಿಂಗ್‌ ಶುರುವಾಗಿದ್ದು, ಪ್ರಾರಂಭದಲ್ಲಿ ₹500 ಪಾವತಿಸಬೇಕು. ಫೋನ್‌ ಪಡೆದ ಬಳಿಕ ₹1000 ಪಾವತಿಸಬೇಕು. 3 ವರ್ಷಗಳ ನಂತರ ಫೋನ್‌ ಹಿಂದಿರುಗಿಸಿದರೆ ಈ ಹಣ ಮರುಪಾವತಿಯಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.