ADVERTISEMENT

ಜೊಮೆಟೊ ವಬ್‌ಸೈಟ್‌ ಹ್ಯಾಕ್: 1.7 ಕೋಟಿ ಬಳಕೆದಾರರ ಮಾಹಿತಿಗೆ ಕನ್ನ

ಏಜೆನ್ಸೀಸ್
Published 18 ಮೇ 2017, 8:24 IST
Last Updated 18 ಮೇ 2017, 8:24 IST
ಜೊಮೆಟೊ ವಬ್‌ಸೈಟ್‌ ಹ್ಯಾಕ್: 1.7 ಕೋಟಿ ಬಳಕೆದಾರರ ಮಾಹಿತಿಗೆ ಕನ್ನ
ಜೊಮೆಟೊ ವಬ್‌ಸೈಟ್‌ ಹ್ಯಾಕ್: 1.7 ಕೋಟಿ ಬಳಕೆದಾರರ ಮಾಹಿತಿಗೆ ಕನ್ನ   

ನವದೆಹಲಿ: ಆನ್‌ಲೈನ್ ಮೂಲಕ ಆಹಾರ ಪದಾರ್ಥಗಳ ಮಾರಾಟಕ್ಕೆ ನೆರವಾಗುವ ಕಂಪೆನಿ ಜೊಮೆಟೊ ವೆಬ್‌ಸೈಟ್‌ ಅನ್ನು ಹ್ಯಾಕ್ ಮಾಡಲಾಗಿದ್ದು, 1.7 ಕೋಟಿ ಬಳಕೆದಾರರ ಇ–ಮೇಲ್ ಮಾಹಿತಿ, ಪಾಸ್‌ವರ್ಡ್‌ಗಳಿಗೆ ಕನ್ನ ಹಾಕಲಾಗಿದೆ.

ಈ ಕುರಿತು ಕಂಪೆನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಗುಂಜನ್ ಪಾಟಿದಾರ್ ಜೊಮೆಟೊದ ಬ್ಲಾಗ್‌ನಲ್ಲಿ ಮಾಹಿತಿ ಪ್ರಕಟಿಸಿದ್ದಾರೆ.

ಪಾವತಿ ಅಥವಾ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಮಾಹಿತಿಗಳು ಕಳವಾಗಿಲ್ಲ. ಇವುಗಳನ್ನು ಪ್ರತ್ಯೇಕ ವಿಭಾಗದಲ್ಲಿ ಸಂರಕ್ಷಿಸಿಡಲಾಗಿತ್ತು. ಅಲ್ಲದೆ, ಬಳಕೆದಾರರ ಪಾಸ್‌ವರ್ಡ್‌ಗಳೂ ಕಳವಾಗಿಲ್ಲ ಎಂದು ಪಾಟಿದಾರ್ ತಿಳಿಸಿದ್ದಾರೆ.

ADVERTISEMENT

ಇದೇ ಮೊದಲಲ್ಲ: ಜೊಮೆಟೊ ವೆಬ್‌ಸೈಟ್‌ಗೆ 2015ರಲ್ಲಿಯೂ ಕನ್ನ ಹಾಕಲಾಗಿತ್ತು. ಈ ಬಾರಿ, ಕಳವು ಮಾಡಿದ ಮಾಹಿತಿಗಳನ್ನು ಹ್ಯಾಕರ್‌ಗಳು ಆನ್‌ಲೈನ್ ಮೂಲಕ ಮಾರಾಟ ಮಾಡುವ ಆತಂಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.