ADVERTISEMENT

ಟೆನಿಸ್‌ ಆಟಗಾರರಿಗೆ ಪ್ಲೇಯರ್‌ ಜೋನ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ಟೆನಿಸ್‌ ಆಟಗಾರರಿಗೆ  ಪ್ಲೇಯರ್‌ ಜೋನ್‌
ಟೆನಿಸ್‌ ಆಟಗಾರರಿಗೆ ಪ್ಲೇಯರ್‌ ಜೋನ್‌   

ವೃತ್ತಿಪರ ಪುರುಷರ ಟೆನಿಸ್‌ ಒಕ್ಕೂಟದ (ಎಟಿಪಿ) ಜತೆ, ದೈತ್ಯ ಐಟಿ ಕಂಪೆನಿ ಇನ್ಫೊಸಿಸ್‌ ಹಣಕಾಸು ನೆರವಿನ ಒಪ್ಪಂದ ಮಾಡಿಕೊಂಡಿದ್ದು ಪ್ರತಿಭಾವಂತ ಆಟಗಾರರಿಗೆ ಧನ ಸಹಾಯ ನೀಡುವುದಾಗಿ ಪ್ರಕಟಿಸಿದೆ.

ಈ ಉದ್ದೇಶಕ್ಕೆ ‘ಪ್ಲೇಯರ್‌ ಜೋನ್‌’ ಹೆಸರಿನ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದೆ. ಈ ಆ್ಯಪ್‌ ಮೂಲಕ ವಿಶ್ವದ ಪ್ರತಿಭಾವಂತ ಟೆನಿಸ್‌ ಆಟಗಾರರು ಮತ್ತು ಕೋಚ್‌ಗಳು ಹಣಕಾಸು ನೆರವು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆಯಬಹುದು.

ಎನ್‌ಎಸ್‌ಡಿಸಿಯಿಂದ ವಿವಿಧ ಆ್ಯಪ್‌

ADVERTISEMENT

ಕೇಂದ್ರದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ಮತ್ತು ಗೂಗಲ್‌ ಇಂಡಿಯಾ ಸಂಸ್ಥೆ ಜಂಟಿಯಾಗಿ ವಿವಿಧ ಮೊಬೈಲ್‌ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಒಪ್ಪಂದ ಮಾಡಿಕೊಂಡಿವೆ.

ಮೊದಲಿಗೆ ರೈಲ್‌ ಆ್ಯಪ್‌ಗಳನ್ನು ಪರಿಣಾಮಕಾರಿಯಾಗಿ ವಿನ್ಯಾಸ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಗೂಗಲ್‌ ಇಂಡಿಯಾ ಸಂಸ್ಥೆಯ ನಿರ್ದೇಶಕ ಪೀಟರ್‌ ಲುಬ್ಬರ್‌ ತಿಳಿಸಿದ್ದಾರೆ.

ನಂತರದ ದಿನಗಳಲ್ಲಿ ಸರ್ಕಾರದ ಅಧೀನದಲ್ಲಿ ಬಳಕೆಯಲ್ಲಿರುವ ಎಲ್ಲ ಮಾದರಿಯ ಆ್ಯಪ್‌ಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಫೇಸ್‌ಬುಕ್‌ ನಿಂದ ಹೊಸ ಆ್ಯಪ್‌

ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌, ಚೀನಾ ಮಾರುಕಟ್ಟೆ ಪ್ರವೇಶ ಮಾಡಲು ಹರಸಾಹಸ ಮಾಡುತ್ತಿದೆ.ಈ ಕಾರಣಕ್ಕೆ ಚೀನಾವನ್ನು ಗಮನದಲ್ಲಿಟ್ಟುಕೊಂಡು ಚೀನಿಯರಿಗಾಗಿ ಸ್ನೇಕಿ ಆ್ಯಪ್‌ ಅನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ಫೇಸ್‌ಬುಕ್‌ ಚಿತ್ರಗಳು ಮತ್ತು ವಿಡಿಯೊಗಳನ್ನು ಫೇಸ್‌ಬುಕ್‌ ಪ್ರಿಯರು ವೀಕ್ಷಣೆ ಮಾಡಬಹುದು.

ಇಲ್ಲಿ ಫೇಸ್‌ಬುಕ್‌, ಚೀನಾ ಸರ್ಕಾರದ ನಿಯಂತ್ರಣದೊಂದಿಗೆ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಚೀನಾ ಪ್ರವಾಸ ಕೈಗೊಂಡಿದ್ದ ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್‌ ಅವರು ಅಲ್ಲಿನ ರಾಜಕೀಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಭೇಟಿ ಫಲಪ್ರದವಾದಲ್ಲಿ ಫೇಸ್‌ಬುಕ್‌ ಚೀನಾ ಮಾರುಕಟ್ಟೆಗೂ ಲಗ್ಗೆ ಹಾಕಲಿದೆ.

ವಿಮಾನ ಪ್ರಯಾಣಿಕರ ಸಂವಹನ ಆ್ಯಪ್‌

ಫ್ರಾನ್ಸ್‌ ವಿಜ್ಞಾನಿಗಳು ವಿಮಾನ ಪ್ರಯಾಣಿಕರು ಮತ್ತು ಪೈಲಟ್‌ಗಳ ಸಂವಹನಕ್ಕಾಗಿ ಆಫ್‌ಮೋಡ್‌ನಲ್ಲಿ ಕೆಲಸ ಮಾಡುವ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ಮೊಬೈಲ್‌ ಆ್ಯಪ್‌ ವಿಮಾನ ಟೇಕ್‌ ಆಫ್‌ ಆದ ಕೂಡಲೇ ಕಾರ್ಯನಿರ್ವಹಿಸುತ್ತದೆ. ಇದನ್ನು ಪ್ರಯಾಣಿಕರು ಮತ್ತು ಪೈಲಟ್‌ಗಳ ಸಂವಹನಕ್ಕಾಗಿ ಮಾತ್ರ ವಿನ್ಯಾಸ ಮಾಡಲಾಗಿದೆ. ಪ್ರಯಾಣಿಕರು ತಲುಪ ಬೇಕಾದ ಸ್ಥಳ ಇನ್ನೂ ಎಷ್ಟು ದೂರದಲ್ಲಿದೆ, ವಿಮಾನ ಎಷ್ಟು ಎತ್ತರದಲ್ಲಿ ಹಾರಾಟ ನಡೆಸುತ್ತಿದೆ, ಉ‍ಪಾಹಾರ, ಕಾಫಿ ಟೀ ಸೇರಿದಂತೆ ಇನ್ನಿತರ ಮಾಹಿತಿ ಈ ಆ್ಯಪ್‌ನಲ್ಲಿ ದೊರೆಯಲಿದೆ.

ಫೋಟೊ ಸ್ಕ್ಯಾನಿಂಗ್‌ ಆ್ಯಪ್‌ಗಳು

ಸ್ಮಾರ್ಟ್‌ಪೋನ್‌ ಬಳಸಿ ತೆಗೆದ ಚಿತ್ರಗಳನ್ನು ಮೊಬೈಲ್‌ ಫೋನ್‌ಗಳಲ್ಲೇ ಸ್ಕ್ಯಾನ್‌ ಮಾಡಬಹುದು. ಇದಕ್ಕಾಗಿ ಹಲವಾರು ಆ್ಯಪ್‌ಗಳು ಡಿಜಿಟಲ್‌ ಮಾರುಕಟ್ಟೆಯಲ್ಲಿ ಲಭ್ಯವಿವೆ. ಕೆಲವು ಆ್ಯಪ್‌ಗಳು ಉಚಿತವಾಗಿ ಲಭ್ಯವಿದ್ದರೆ, ಇನ್ನು ಕೆಲವನ್ನು ಹಣಕೊಟ್ಟು ಖರೀದಿಸಬೇಕು.

ಈ ಸ್ಕ್ಯಾನಿಂಗ್‌ ಆ್ಯಪ್‌ಗಳು ಫೋಟೋಶಾಪ್‌ನಂತೆ ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಗೂಗಲ್‌ ಫೋಟೊ ಸ್ಕ್ಯಾನ್‌, ಫೋಟೊಮೈನ್ ಮತ್ತು ಟರ್ಬೋ ಸ್ಕ್ಯಾನ್‌ ಆ್ಯಪ್‌ಗಳು ಹೆಚ್ಚು ಬಳಕೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.