ADVERTISEMENT

ಡೆಬಿಟ್ ಕಾರ್ಡ್‌; ಶೀಘ್ರ ವರದಿ

ಪಿಟಿಐ
Published 23 ಅಕ್ಟೋಬರ್ 2016, 19:30 IST
Last Updated 23 ಅಕ್ಟೋಬರ್ 2016, 19:30 IST

ನವದೆಹಲಿ : ಡೆಬಿಟ್‌ ಕಾರ್ಡ್‌ಗಳ ಮಾಹಿತಿಗೆ ಕನ್ನ ಹಾಕಿದ ಘಟನೆಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಸೇರಿದಂತೆ ವಿವಿಧ ಸಂಸ್ಥೆಗಳು ಹಣಕಾಸು ಇಲಾಖೆಗೆ ಹತ್ತು ದಿನಗಳಲ್ಲಿ ವರದಿ ಸಲ್ಲಿಸಲಿವೆ.

‘ಭದ್ರತಾ ಲೋಪ ಕುರಿತ ತಾಂತ್ರಿಕ ವಿಚಾರಣೆಯ ಫಲಿತಾಂಶ ಎಂಟು, ಹತ್ತು ದಿನಗಳಲ್ಲಿ  ಬರಲಿದ್ದು  ವಾಸ್ತವಾಂಶ ತಿಳಿಯಲಿದೆ. ಮಾಹಿತಿಗೆ ಕನ್ನ ಹಾಕಿದ ಬಗ್ಗೆ ಈ ತನಿಖೆಯು ಸಂಪೂರ್ಣ ವಿವರ ಒದಗಿಸಲಿದೆ ಎಂದು  ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ಸೈಬರ್‌ ಕುತಂತ್ರಾಂಶದಿಂದ ಕೆಲ ಎಟಿಎಂಗಳಿಂದ ಡೆಬಿಟ್‌ ಕಾರ್ಡ್‌ಗಳ ಮಾಹಿತಿ ಸೋರಿಕೆಯಾಗಿದ್ದು ತಕ್ಷಣ ಈ ಬಗ್ಗೆ ವಿವರವಾದ ವರದಿ ನೀಡುವಂತೆ ಹಣಕಾಸು ಸಚಿವಾಲಯವು ಆರ್‌ಬಿಐ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಸೂಚಿಸಿತ್ತು. ಸಂಭವನೀಯ ಸೈಬರ್‌ ದಾಳಿ ಎದುರಿಸಲು ಕೈಗೊಂಡ ಕ್ರಮಗಳ ಬಗ್ಗೆಯೂ ಮಾಹಿತಿ ಕೇಳಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.