ADVERTISEMENT

ನಿವೃತ್ತ ಬ್ಯಾಂಕ್‌ ನೌಕರರ ಆರೋಗ್ಯ ವಿಮೆ

ಯು.ಪಿ.ಪುರಾಣಿಕ್
Published 25 ಅಕ್ಟೋಬರ್ 2016, 19:30 IST
Last Updated 25 ಅಕ್ಟೋಬರ್ 2016, 19:30 IST
ನಿವೃತ್ತ ಬ್ಯಾಂಕ್‌ ನೌಕರರ ಆರೋಗ್ಯ ವಿಮೆ
ನಿವೃತ್ತ ಬ್ಯಾಂಕ್‌ ನೌಕರರ ಆರೋಗ್ಯ ವಿಮೆ   
ಅಖಿಲ ಭಾರತ ಬ್ಯಾಂಕುಗಳ ಒಕ್ಕೂಟವು ತನ್ನ ಸದಸ್ಯ ಬ್ಯಾಂಕುಗಳ ಎಲ್ಲಾ ವರ್ಗದ ನಿವೃತ್ತ ನೌಕರರಿಗೆ ಒಂದು ಉತ್ತಮ ಆರೋಗ್ಯ ವಿಮೆ ಯೋಜನೆ ರೂಪಿಸಿದೆ. ವೈದ್ಯಕೀಯ ತಂತ್ರಜ್ಞಾನದ ಪ್ರಗತಿಯಿಂದಾಗಿ  ಬಹಳಷ್ಟು ಕಾಯಿಲೆಗಳಿಗೆ  ಅಗತ್ಯ  ಚಿಕಿತ್ಸೆ ಹಾಗೂ ಜೀವ ಉಳಿಸುವ ಔಷಧಗಳು ಲಭ್ಯವಿರುತ್ತವೆ.
 
ಆದರೆ,   ದುಬಾರಿ ಆಸ್ಪತ್ರೆ ಖರ್ಚು, ಶಸ್ತ್ರಚಿಕಿತ್ಸೆಗೆ ತಗಲುವ ಖರ್ಚು ಔಷಧ ಹಾಗೂ ವೈದ್ಯಕೀಯ ವೆಚ್ಚ ಒಮ್ಮೇಲೆ  ಭರಿಸಲು ಸಾಧ್ಯವಾಗುವುದಿಲ್ಲ. ಇಂತಹ ಅನಿರೀಕ್ಷಿತ ಸಂದರ್ಭದಲ್ಲಿ ಹಣ ಕೊಡದೆ (Cash *ess) ಉಚಿತವಾಗಿ ಇಂತಹ ಸೌಲತ್ತುಗಳನ್ನು ಆಸ್ಪತ್ರೆಯಲ್ಲಿ ಪಡೆಯಲು   ಆರೋಗ್ಯ ವಿಮೆ ಸೌಲಭ್ಯಕ್ಕೆ ಮೊರೆ ಹೋಗಬೇಕಾಗುತ್ತದೆ.
 
ಹೀಗೆ ಆರೋಗ್ಯ ವಿಮೆ ಮಾಡಿಸಿದ ಪಾಲಿಸಿಯಲ್ಲಿ ನಮೂದಿಸಿದ ಇತಿಮಿತಿ ಒಳಗೆ ವಿಮಾ ಕಂಪೆನಿಗಳು ಗುರುತಿಸಿದ ಆಸ್ಪತ್ರೆಗಳಲ್ಲಿ, ವಿಮಾ ಕಂಪೆನಿಯವರು ಕೊಟ್ಟಿರುವ ಐ.ಡಿ. ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡು ನಕಲು ಹಾಜರುಪಡಿಸಿ, ಹಣ ಪಾವತಿಸದೆ, ವಿಮಾ ಮಿತಿಯೊಳಗೆ, ಚಿಕಿತ್ಸೆ ಪಡೆಯುವುದೇ ‘ಆರೋಗ್ಯ ವಿಮೆ’ಯ ಮೂಲ ತತ್ವವಾಗಿದೆ.
 
ಬ್ಯಾಂಕ್‌ ನೌಕರರಲ್ಲಿ ಅಧಿಕಾರಿಗಳು (ಜೂನಿಯರ್‌ ಆಫೀಸರ್‌ನಿಂದ ಹೆಚ್ಚಿನ ಹುದ್ದೆಯಲ್ಲಿ ಇರುವವರು) ಹಾಗೂ ಸ್ಪೆಷಲ್‌ ಅಸಿಸ್ಟಂಟ್‌್ಸ, ಕ್ಲರ್ಕ್‌್ಸ, ಅಟೆಂಡರ್‌ ಮತ್ತು ಸ್ವೀಪರ್‌   ಹೀಗೆ ಹಲವು ವಿಧಗಳಿವೆ. ಇವರಿಗೆ ಪ್ರತ್ಯೇಕವಾಗಿ ಆರೋಗ್ಯ ವಿಮೆ ಮಿತಿ  ನಿಗದಿಪಡಿಸಲಾಗಿದೆ. ಈ ವರ್ಷ ನಿಗದಿಪಡಿಸಿದ ಆರೋಗ್ಯ ವಿಮೆ ಮಿತಿ ಅಧಿಕಾರಿಗಳಿಗೆ ₹ 4 ಲಕ್ಷ, ಅವಾರ್ಡ್‌ ಸ್ಟಾಫ್‌ಗೆ ₹ 3  ಲಕ್ಷ ಇದೆ.
 
ಆರೋಗ್ಯ ವಿಮೆ ನಿಯಮಾವಳಿಗಳಲ್ಲಿ ಸೂಚಿಸಿದಂತೆ, ವಿಮೆ ಇಳಿಸಿದ ವ್ಯಕ್ತಿ, ಕನಿಷ್ಠ 24 ಗಂಟೆಗಳ ಕಾಲವಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಲ್ಲಿ ಮಾತ್ರ ಅಂತಹ ವ್ಯಕ್ತಿ ವಿಮೆಯ ಪ್ರಯೋಜನ ಅಂದರೆ ಹಣ ಕೊಡದೆ   ಚಿಕಿತ್ಸೆ ಪಡೆಯಬಹುದಾಗಿದೆ. ಆದರೆ ಬಹಳಷ್ಟು ಕಾಯಿಲೆಗಳು, ತೀವ್ರ  ಸ್ವರೂಪದಲ್ಲಿದ್ದರೂ, ಅಂತಹ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗದೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ.
 
ಇಂತಹ ಸಂದರ್ಭದಲ್ಲಿ ಸ್ವಲ್ಪ ಹೆಚ್ಚಿನ ಪ್ರೀಮಿಯಂ ಕೊಟ್ಟಲ್ಲಿ ಈ ಸೌಲತ್ತು ಪಡೆಯಲು, ಐ.ಬಿ.ಎ. ರೂಪಿಸಿರುವ ಆರೋಗ್ಯ ವಿಮಾ ಯೋಜನೆಯಲ್ಲಿ ಈ ಸಾರಿ ಒಂದು ಉತ್ತಮ ಅವಕಾಶ ನೀಡಲಾಗಿದೆ. ಮನೆಯಲ್ಲಿಯೇ ಕುಳಿತು ಚಿಕಿತ್ಸೆಯನ್ನು ಪಡೆಯುವುದಕ್ಕೆ ‘ಡೊಮಿಸಲರಿ ಟ್ರೀಟ್‌ಮೆಂಟ್‌’ (Domici*iary Treatment) ಎಂದು ಕರೆಯುತ್ತಾರೆ.
 
 ಡೊಮಿಸಲರಿ ಹಾಸ್ಪಿಟಲಾಯಿಸೇಶನ್‌ ಎಂದರೆ ಆಸ್ಪತ್ರೆಗಳಲ್ಲಿ ಸ್ಥಳಾವಕಾಶವಿಲ್ಲದೇ ವೈದ್ಯರಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವ ವಿಧಾನ.   ಪಾಲಿಸಿಯಲ್ಲಿ ಡೊಮಿಸಲರಿ ಟ್ರೀಟ್‌ಮೆಂಟಿಗೆ ಅವಕಾಶವಿದ್ದಲ್ಲಿ, ಡೊಮಿಸಲರಿ ಹಾಸ್ಟಿಟಲಾಯಿಸೆಶನ್ನಿಗೂ  ಅವಕಾಶ ಇರುತ್ತದೆ.
 
ಇದೊಂದು ಹಿರಿಯ ನಾಗರಿಕರಿಗೆ ಹೇಳಿ ಮಾಡಿಸಿದ ಪಾಲಿಸಿಯಾಗಿದೆ. ಗಂಡ ಹೆಂಡತಿಗೆ ಪಾಲಿಸಿ ಮೊತ್ತದೊಳಗೆ ಸಂಪೂರ್ಣ ಸೌಲತ್ತು ದೊರೆಯುತ್ತದೆ, ಜೊತೆಗೆ ಇದು ಪ್ಲೋಟರ್‌ ಪಾಲಿಸಿಯಾದ್ದರಿಂದ ಇವರಲ್ಲಿ ಯಾರಾದರೊಬ್ಬರೂ ಕೂಡಾ ಅವಶ್ಯಬಿದ್ದಾಗ ಪಾಲಿಸಿಯ ಸಂಪರ್ಣ ಮೊತ್ತದ ಚಿಕಿತ್ಸೆ ಯನ್ನು ಆಸ್ಪತ್ರೆಯಲ್ಲಿ ಪಡೆಯಬಹುದಾಗಿದೆ.
 
* ಇಲ್ಲಿ ವಯಸ್ಸಿನ ಮಿತಿ ಇರುವುದಿಲ್ಲ ಹಾಗೂ ಈಗಾಗಲೇ ಇರುವ ಕಾಯಿಲೆಗಳಿಗೂ ಚಿಕಿತ್ಸೆ ಪಡೆದು ವಿಮೆ ಸೌಲತ್ತು ಪಡೆಯಬಹುದು. ಹೆಚ್ಚಿನ ಆರೋಗ್ಯ ವಿಮಾ ಕಂಪೆನಿಗಳು, 65 ವರ್ಷ ದಾಟಿದ ವ್ಯಕ್ತಿಗಳಿಗೆ ಆರೋಗ್ಯ ವಿಮೆ ಸೌಲತ್ತು ನೀಡುವುದಿಲ್ಲ.  ಒಂದೆರಡು ಕಂಪೆನಿಗಳು ಅವಕಾಶ ನೀಡಿದರೂ, 80 ವರ್ಷ ದಾಟಿದ ನಂತರ ಯಾವ ಆರೋಗ್ಯ ವಿಮಾ ಕಂಪೆನಿಯೂ, ಪಾಲಿಸಿ ನವೀಕರಿಸುವುದಿಲ್ಲ.
 
ವಯಸ್ಸಿನ ಪರಿಮಿತಿ ಇಲ್ಲದೆ ಜೀವನ ಪೂರ್ತಿ ಆರೋಗ್ಯ ವಿಮೆ ಸೌಲತ್ತು ಪಡೆಯಲು ನಿವೃತ್ತ ಬ್ಯಾಂಕ್‌ ನೌಕರರಿಗೆ ಐ.ಬಿ.ಎ.   ‘ಸುವರ್ಣಾವಕಾಶ’   ಒದಗಿಸಿದೆ.
ಈ ಸೌಲಭ್ಯವನ್ನು ಈ ವರ್ಷ ಪಡೆಯದಿದ್ದರೆ ಈ ಯೋಜನೆಗೆ  ಮುಂದೆ ಸೇರಲು ಅವಕಾಶ ಇರುವುದಿಲ್ಲ.   ಇದೊಂದು ಕೊನೆಯ ಅವಕಾಶ ಎನ್ನುವುದು ನೆನಪಿರಲಿ.
 
* ಉಳಿದ ಎಲ್ಲಾ ಆರೋಗ್ಯ ವಿಮಾ ಪಾಲಿಸಿಗಳಲ್ಲಿ, ಆಸ್ಪತ್ರೆಯಲ್ಲಿ ಅಥವಾ ಮನೆಯಲ್ಲಿ ಚಿಕಿತ್ಸೆ ಪಡೆಯಲು ಬಹಳಷ್ಟು ಮುಖ್ಯವಾದ ಕಾಯಿಲೆಗಳಿಗೆ ಅವಕಾಶವಿರುವುದಿಲ್ಲ. ಅದರೆ ಈ ಪಾಲಿಸಿಯಲ್ಲಿ ಅವಕಾಶವಿರದ ಚಿಕಿತ್ಸೆಗಳು ತುಂಬಾ ವಿರಳ.
 
* ವಿಮಾ ಕಂತು ಒಂದು ಖರ್ಚು ಅಥವಾ ವ್ಯಯ ಎಂಬುದಾಗಿ ಯೋಜಿಸಬೇಡಿ. ಆಪತ್ತಿನಲ್ಲಿ ನಿಮಗೆ ಒದಗುವ ಹೂಡಿಕೆ ಎಂದೇ ಭಾವಿಸಿ. 
ಉಪಯುಕ್ತ ಮಾಹಿತಿ 
 
* ಯುನೈಟೆಡ್‌ ಇಂಡಿಯಾ ಇನ್ಶುರನ್‌್ಸ ಕಂಪೆನಿ ತಿಳಿಸಿದಂತೆ ಪಾಲಿಸಿಯಲ್ಲಿ ನಮೂದಿಸಿದ 59 ಕಾಯಿಲೆಗಳಿಗೆ ಆಸ್ಪತ್ರೆ ಸೇರದೆ ಮನೆಯಲ್ಲಿ ಚಿಕಿತ್ಸೆ ಪಡೆಯಲು ತಗಲುವ ಔಷಧೋಪಚಾರಗಳ   ವೆಚ್ಚವನ್ನು ಇನ್ಶುರನ್‌್ಸ ಕಂಪೆನಿ ಭರಿಸುತ್ತದೆ.
 
* ಡಾಮಿಸಲರಿ ಚಿಕಿತ್ಸೆ ಹಣ ಪಡೆಯಲು, ಇನ್ಶುರನ್‌್ಸ ಕಂಪೆನಿಯ ಅರ್ಜಿ ತುಂಬಿ, ಡಾಕ್ಟರ್‌ ಕನ್ಸ್‌ಲ್‌ಟೇಶನ್‌, ಪ್ರಿಸ್‌ಕ್ರಿಪ್ಶನ್‌, ಔಷಧಗಳ ಬಿಲ್ಲುಗಳು ಹಾಗೂ ತಪಾಸಣೆ ವರದಿಯ ಮೂಲ ಪ್ರತಿಯನ್ನು ಕಳಿಸಬೇಕಾಗುತ್ತದೆ. ಹೀಗೆ ಕಳಿಸುವಾಗ ಜೆರಾಕ್‌್ಸ ಮಾಡಿ ಒಂದು ನಕಲು ನಿಮ್ಮ ಬಳಿ ಇಟ್ಟುಕೊಳ್ಳಿ.
 
* ಡಾಕ್ಟರ್‌ ಪ್ರಿಸ್‌ಕ್ರಿಪ್ಶನ್‌  ಅವಧಿ ಮೂರು ತಿಂಗಳು ಮಾತ್ರ. ಜೀವನವಿಡೀ ಚಿಕಿತ್ಸೆ ಪಡೆಯುವಲ್ಲಿ  ವೈದ್ಯರಿಂದ 189 ದಿವಸಗಳೊಳಗೆ ಹೊಸತಾಗಿ ಪ್ರಿಸ್‌ಕ್ರಿಪ್ಶನ್‌ ಪಡೆಯಬೇಕಾಗುತ್ತದೆ.
 
* ಬಿಲ್‌ಗಳನ್ನು ಪ್ರತಿ ತಿಂಗಳೂ ಅಂದರೆ, ಈ ತಿಂಗಳ ಬಿಲ್ಲು ಮುಂದಿನ ತಿಂಗಳು 10 ರೊಳಗೆ ಕ್ಲೇಮ್‌ ಮಾಡಬಹುದು. ಬಿಲ್ಲುಗಳನ್ನು ಸ್ಪೀಡ್‌ ಅಥವಾ ರಿಜಿಸ್ಟರ್ಡ್‌ ಪೋಸ್‌್ಟನಲ್ಲಿ ಕಳಿಸಿರಿ.
 
* ಬಿಲ್‌ಗಳನ್ನು, ಇನ್ಸುರನ್‌್ಸ ಕಂಪೆನಿ ನೇಮಕ ಮಾಡಿರುವ ಮೂರನೇ ಕಕ್ಷಿ ನಿರ್ವಾಹಕರಿಗೆ (Third Party Administrators-T.P.A.) ಸಲ್ಲಿಸಬೇಕು. ಯುನೈಟೆಡ್‌ ಇಂಡಿಯಾ ಇನ್ಶುರನ್‌್ಸ ಕಂಪೆನಿ (Vida* Hea*th Tpa (P) *td.) ಬೆಂಗಳೂರು, ಇವರನ್ನು ನೇಮಿಸಿಕೊಂಡಿದ್ದಾರೆ.
 
* ಟಿ.ಪಿ.ಎ.ಗೆ ಕ್ಲೇಮ್‌ನಲ್ಲಿ ಸಂಶಯ ಬಂದಲ್ಲಿ,  ಕಾರಣ ಕೊಟ್ಟು, ಹಣ ಪಾವತಿಸುವುದನ್ನು ನಿರಾಕರಿಸುವ ಹಕ್ಕು ಇರುತ್ತದೆ ಹಾಗೂ ಅವರು ಕಾಲಕಾಲಕ್ಕೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಪಾಲಿಸಿದಾರರು ಬಾಧ್ಯರಾಗುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.