ADVERTISEMENT

ಪ್ರವಾಸಿ ತಾಣಗಳ ಪ್ರಚಾರಕ್ಕೆ ಶೆಹನಾಜ್‌

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 19:30 IST
Last Updated 16 ಸೆಪ್ಟೆಂಬರ್ 2017, 19:30 IST
ಪ್ರವಾಸ ಹೊರಡುವ ಮುನ್ನ ನಟಿ ಶೆಹನಾಜ್ ಟ್ರೆಜರಿವಾಲಾ ವಿಧಾನಸೌಧದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಕ್ಯಾಮೆರಾಗಳಿಗೆ ನೀಡಿದ ಭಂಗಿ
ಪ್ರವಾಸ ಹೊರಡುವ ಮುನ್ನ ನಟಿ ಶೆಹನಾಜ್ ಟ್ರೆಜರಿವಾಲಾ ವಿಧಾನಸೌಧದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಕ್ಯಾಮೆರಾಗಳಿಗೆ ನೀಡಿದ ಭಂಗಿ   

ಬೆಂಗಳೂರು: ವಿಶ್ವ ಪ್ರವಾಸಿ ದಿನದ ಅಂಗವಾಗಿ ಪ್ರವಾಸಿ ತಾಣಗಳ ಪ್ರಚಾರಕ್ಕೆ ನಟಿ, ರೂಪದರ್ಶಿ ಶೆಹನಾಜ್‌ ಟ್ರೆಜರಿವಾಲಾ 14 ದಿನಗಳ ಪ್ರವಾಸ ಆರಂಭಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಓಲಾ ಸಂಸ್ಥೆ ಸಹಯೋಗದಲ್ಲಿ ಆರಂಭಿಸಿರುವ ಪ್ರವಾಸಕ್ಕೆ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸೌಧದ ಬಳಿ ಶನಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಪ್ರಿಯಾಂಕ್, ‘ಶೆಹನಾಜ್‌ ಹಂಪಿ, ಐಹೊಳೆ, ಪಟ್ಟದಕಲ್ಲು, ಬದಾಮಿ ಅಲ್ಲದೇ ಜನಪ್ರಿಯವಲ್ಲದ ತಾಣಗಳಿಗೂ ಭೇಟಿ ನೀಡಲಿದ್ದಾರೆ.

ADVERTISEMENT

‘ಏಳು ರಾಜ್ಯಗಳ ವ್ಯಾಪ್ತಿಯ 21 ತಾಣಗಳಿಗೆ ತೆರಳಲಿದ್ದು, ಓಲಾ ಟ್ಯಾಕ್ಸಿಯಲ್ಲಿ ಪ್ರವಾಸ ಮಾಡಲಿದ್ದಾರೆ. ಮಹಿಳೆಯರ ಏಕಾಂಗಿ ಪ್ರವಾಸಕ್ಕೆ ಕರ್ನಾಟಕ ಸುರಕ್ಷಿತ ಎಂಬ ಸಂದೇಶ ಸಾರುವುದು ಕೂಡ ಇದರ ಉದ್ದೇಶವಾಗಿದೆ’ ಎಂದರು.

ಓಲಾ ಸಂಸ್ಥೆಯ ಸಹಭಾಗಿತ್ವದಲ್ಲಿ ಬೆಂಗಳೂರಿನಿಂದ ನಂದಿಬೆಟ್ಟ ಮತ್ತು ಬನ್ನೇರುಘಟ್ಟಕ್ಕೆ ಪ್ಯಾಕೇಜ್ ಪ್ರವಾಸ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೇರೆಡೆಗೂ ಪ್ಯಾಕೇಜ್ ಪ್ರವಾಸ ಆರಂಭಿಸುವ ಉದ್ದೇಶ ಇದೆ ಎಂದು ಹೇಳಿದರು.

ಪ್ರವಾಸಿಗರ ಸುರಕ್ಷತೆಗಾಗಿ ಗೃಹ ರಕ್ಷಕ ದಳದ 500 ಸಿಬ್ಬಂದಿಗೆ ತರಬೇತಿ ನೀಡಿ ಪ್ರವಾಸಿ ಮಿತ್ರರನ್ನಾಗಿ ನೇಮಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆ ಮೂಲಕವೇ ಕಾಯಂ ನೇಮಕ ಮಾಡಿಕೊಳ್ಳುವ ಆಲೋಚನೆ ಇದೆ ಎಂದರು.

**

ರಸ್ತೆ ಮಾರ್ಗದಲ್ಲಿ ಪ್ರವಾಸ ಮಾಡುವುದರಿಂದ ಭೌಗೋಳಿಕವಾಗಿ ತಿಳಿದುಕೊಳ್ಳಲು ಅವಕಾಶವಾಗುತ್ತದೆ. 14 ದಿನಗಳ ಪ್ರವಾಸಕ್ಕೆ ಉತ್ಸುಕಳಾಗಿದ್ದೇನೆ. ಅವಕಾಶ ಕಲ್ಪಿಸಿದವರಿಗೆ ಧನ್ಯವಾದಗಳು.
–ಶೆನಾಜ್‌ ಟ್ರೆಜರಿವಾಲಾ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.