ADVERTISEMENT

ಬಳ್ಳಾರಿ ಎಸ್‌ಬಿಐ ಶಾಖೆಗೆ ನೂರರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 20:02 IST
Last Updated 19 ಮಾರ್ಚ್ 2018, 20:02 IST
ಬ್ಯಾಂಕ್‌ನ ದಾವಣಗೆರೆ ಆಡಳಿತ ಕಚೇರಿಯ ಉಪಪ್ರಧಾನ ವ್ಯವಸ್ಥಾಪಕ ಮಧುಸೂದನ ರೆಡ್ಡಿ ಅವರು ಗ್ರಾಹಕರೊಂದಿಗೆ ಕೇಕ್‌ ಕತ್ತರಿಸಿದರು
ಬ್ಯಾಂಕ್‌ನ ದಾವಣಗೆರೆ ಆಡಳಿತ ಕಚೇರಿಯ ಉಪಪ್ರಧಾನ ವ್ಯವಸ್ಥಾಪಕ ಮಧುಸೂದನ ರೆಡ್ಡಿ ಅವರು ಗ್ರಾಹಕರೊಂದಿಗೆ ಕೇಕ್‌ ಕತ್ತರಿಸಿದರು   

ಬಳ್ಳಾರಿ: ನಗರದ ಎಸ್‌ಬಿಐ ಪ್ರಧಾನ ಶಾಖೆಯಲ್ಲಿ ಸೋಮವಾರ ಶತಮಾನೋತ್ಸವ ಸಂಭ್ರಮ ಮನೆ ಮಾಡಿತ್ತು. ಬ್ರಿಟಿಷರ ಆಡಳಿತದ ಅವಧಿಯಲ್ಲಿ ಆಗಿನ ಮದ್ರಾಸ್‌ ಬ್ಯಾಂಕ್‌ನ 2ನೇ ಇನ್‌ಲ್ಯಾಂಡ್‌ ಶಾಖೆಯಾಗಿ ಆರಂಭವಾಗಿದ್ದ ನೆನಪಿಗಾಗಿ ಅಧಿಕಾರಿಗಳು ಮತ್ತು ಗ್ರಾಹಕರ ಸಭೆಯನ್ನು ಸೋಮವಾರ ಆಯೋಜಿಸಲಾಗಿತ್ತು.

‘ಇನ್‌ ಲ್ಯಾಂಡ್‌ ಶಾಖೆಯು ನಗರದಲ್ಲಿ 1865ರ ಆ. 22ರಂದು ಆರಂಭವಾಗಿತ್ತು. ವಹಿವಾಟಿನಲ್ಲಿ ಕುಸಿತ ಕಂಡುಬಂದ ಕಾರಣ, 1901ರ ಜುಲೈ 15ರಂದು ಬ್ಯಾಂಕಿನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. 17 ವರ್ಷಗಳ ನಂತರ 1918ರ ಮಾ. 18ರಂದು ಮತ್ತೆ ಬಳ್ಳಾರಿ ಶಾಖೆಯನ್ನು ಆರಂಭಿಸಲಾಗಿತ್ತು’ ಎಂದು ಬ್ಯಾಂಕಿನ ದಾವಣಗೆರೆ ಆಡಳಿತ ಕಚೇರಿಯ ಉಪ ಪ್ರಧಾನ ವ್ಯವಸ್ಥಾಪಕ ಮಧುಸೂದನ ರೆಡ್ಡಿ ಮಾಹಿತಿ ನೀಡಿದರು.

‘1945ರವರೆಗೆ ಬ್ರಿಟಿಷ್‌ ಅಧಿಕಾರಿಗಳೇ ಶಾಖೆಯ ಮುಖ್ಯಸ್ಥರಾಗಿದ್ದರು. ಬಳಿಕ ಶಾಖೆಯ ಜವಾಬ್ದಾರಿಯನ್ನು ಭಾರತೀಯ ಅಧಿಕಾರಿಗಳಿಗೆ ವಹಿಸಲಾಯಿತು. ಇಲ್ಲಿ ಕಾರ್ಯನಿರ್ವಹಿಸಿದ ಹಲವರು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದಾರೆ’.

ADVERTISEMENT

‘ನಾಲ್ಕು ಎಕರೆಗೂ ಹೆಚ್ಚಿನ ಪ್ರದೇಶ ಹೊಂದಿರುವ ನಗರದ ಮುಖ್ಯ ಶಾಖೆಯ ಆವರಣದಲ್ಲೇ ಕೃಷಿ ಅಭಿವೃದ್ಧಿ ಬ್ಯಾಂಕ್‌ ಮತ್ತು ಕಿರು ಮತ್ತು ಮಧ್ಯಮ ಉದ್ಯಮಶೀಲತಾ ಬ್ಯಾಂಕ್‌ (ಎಸ್‌ಎಂಇ) ಶಾಖೆ ಕೂಡ ಕಾರ್ಯನಿರ್ವಹಿಸುತ್ತಿದೆ. ನಗರದಲ್ಲಿ 19 ಸೇರಿ, ಜಿಲ್ಲೆಯಲ್ಲಿ 41 ಶಾಖೆಗಳಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.