ADVERTISEMENT

ಬಹೂಪಯೋಗಿ ‘ಮಲ್ಟಿಕ್ಸ್‌’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 19:30 IST
Last Updated 12 ಫೆಬ್ರುವರಿ 2017, 19:30 IST

ಬೆಂಗಳೂರು: ಐಷರ್‌ ಪೋಲಾರಿಸ್‌ ಕಂಪೆನಿಯ ಹೊಸ ಬಹೂಪಯೋಗಿ ವಾಹನ ‘ಮಲ್ಟಿಕ್ಸ್‌’ ರಾಜ್ಯದ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಅಮೆರಿಕದ ಮುಂಚೂಣಿ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಪೋಲಾರಿಸ್‌ ಇಂಡಸ್ಟ್ರೀಸ್‌ ಮತ್ತು ಐಶರ್‌ ಮೋಟರ್ಸ್‌  ಜಂಟಿಯಾಗಿ  ಹೊಸ ಲಘು ವಾಣಿಜ್ಯ ಮತ್ತು ಪ್ರಯಾಣ ವಾಹನ ಹೊರತಂದಿವೆ.

ಟ್ರಕ್‌, ಟ್ರ್ಯಾಕ್ಟರ್‌ ಸೇರಿದಂತೆ ಬೃಹತ್‌ ವಾಹನ ಮತ್ತು ರಾಯಲ್ ಎನ್‌ಫಿಲ್ಡ್ ದ್ವಿಚಕ್ರ ವಾಹನಗಳಿಂದ ಐಶರ್‌ ಹೆಸರುವಾಸಿಯಾಗಿದೆ. 
ಸಣ್ಣ ವರ್ತಕರನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಈ ವಾಹನ ಬಿಡುಗಡೆ ಮಾಡಿದ್ದು, ವಾಣಿಜ್ಯ ಮತ್ತು ವೈಯಕ್ತಿಕ ಉದ್ದೇಶಗಳಿಗೂ ಬಳಸಿಕೊಳ್ಳಬಹುದಾದ ಬಹುಪಯೋಗಿ ವಾಹನ ಇದಾಗಿದೆ ಎಂದು ಐಶರ್‌ ಪೋಲಾರಿಸ್‌ ಪ್ರೈವೇಟ್‌ ಲಿಮಿಟೆಡ್‌ ಸಿಇಒ ಪಂಕಜ್‌ ದುಬೆ ‘ಪ್ರಜಾವಾಣಿ’ಗೆ ತಿಳಿಸಿದರು. 

3 ಕೆ.ವಿ. ವಿದ್ಯುತ್‌ ಉತ್ಪಾದಿಸುವ ತಂತ್ರಜ್ಞಾನ ಹೊಂದಿರುವುದು ಈ ವಾಹನದ ವಿಶೇಷತೆ. ವಿದ್ಯುತ್‌ ಅನ್ನು ಗ್ರಾಹಕರು ತಮ್ಮ ಅನುಕೂಲಕಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು ಎಂದು ಅವರು ತಿಳಿಸಿದರು.

ಬಿಎಸ್‌3 ಮತ್ತು 4 ಎರಡೂ ಮಾದರಿಯಲ್ಲಿರು ಸಿಗುವ ವಾಹನ ಒಂದು ಲೀಟರ್‌ ಡೀಸೆಲ್‌ಗೆ 29 ಕಿ.ಮೀ ಮೈಲೇಜ್‌ ನೀಡುತ್ತದೆ. 450 ಕೆ.ಜಿ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.  ಬೆಂಗಳೂರಿನಲ್ಲಿ ವಾಹನದ ಎಕ್ಸ್‌–ಶೋರೂಂ ಬೆಲೆ ₹2.67 ಲಕ್ಷದಿಂದ ₹3.49 ಲಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.