ADVERTISEMENT

ಬಾಷ್‌ ಕೌಶಲ ತರಬೇತಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 19:30 IST
Last Updated 21 ಏಪ್ರಿಲ್ 2017, 19:30 IST

ಬೆಂಗಳೂರು: ಅಭಿವೃದ್ಧಿ ಪಥದಲ್ಲಿ ಇರುವ ಭಾರತದ ವ್ಯಾಪಾರ ಮತ್ತು  ವಾಣಿಜ್ಯ ಕ್ಷೇತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಸೇವೆ ಮತ್ತು ತಯಾರಿಕೆ ಉದ್ಯಮದಲ್ಲಿ ಕೌಶಲ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳಿಗೆ  ಅಗತ್ಯ ತರಬೇತಿ ನೀಡಲು ಬಾಷ್‌ ಸಂಸ್ಥೆ ನಿರ್ಧರಿಸಿದೆ.

‘ಸೇವಾ ವಲಯ ಮತ್ತು  ತಯಾರಿಕೆ ಉದ್ಯಮಗಳಲ್ಲಿ ಕೆಲಸ ಪಡೆಯಲು ಬೇಕಾದ ಅಗತ್ಯ ಕೌಶಲಗಳ ಕುರಿತು ತರಬೇತಿ ನೀಡಲು ಮತ್ತು ಸೇವಾ ಗುಣಮಟ್ಟ ಹೆಚ್ಚಿಸಲು  ಬಾಷ್‌ ವೃತ್ತಿಪರ ಕೇಂದ್ರ (ಬಿವಿಸಿ) ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ   ಸೌಮಿತ್ರ ಭಟ್ಟಾಚಾರ್ಯ  ತಿಳಿಸಿದ್ದಾರೆ.

‘ಅರ್ಧಕ್ಕೆ ಶಿಕ್ಷಣ ನಿಲ್ಲಿಸಿದ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ವಿಶೇಷ ವೃತ್ತಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ’ ಎಂದರು.

ADVERTISEMENT

‘ಈ ಕಾರ್ಯಕ್ರಮಗಳ ಮೂಲಕ 11,000 ವಿದ್ಯಾರ್ಥಿಗಳಿಗೆ  ಪ್ರಯೋಜನ ಸಿಗಲಿದೆ. ಬಾಷ್‌ನಲ್ಲಿ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುವ ಭರವಸೆ ನೀಡುತ್ತೇವೆ’ ಎಂದರು.

2020ರ ವೇಳೆಗೆ ತಯಾರಿಕಾ  ಕ್ಷೇತ್ರಕ್ಕೆ ಬೇಡಿಕೆ ಹೆಚ್ಚಲಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ‘ಭಾರತದಲ್ಲಿಯೇ ತಯಾರಿಸಿ’ ಯೋಜನೆಗೆ  ಸಂಸ್ಥೆ ಕೈ ಜೋಡಿಸಿದೆ.  2025ರ ಹೊತ್ತಿಗೆ 9 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ.

ವಿಜ್ಞಾನದ ಪಾಠ:ಅಗಸ್ತ್ಯ ಫೌಂಡೇಷನ್ ಜತೆ ಭಾಷ್‌ ಇಂಡಿಯಾ ಕೈ ಜೋಡಿಸಿದ್ದು, ವಿಜ್ಞಾನ ಶಿಕ್ಷಣ ವಂಚಿತ ಮತ್ತು ಪ್ರಯೋಗಾಲಯಗಳು  ಇಲ್ಲದ ಶಾಲೆಗಳನ್ನು ಗುರುತಿಸಿ ವಿಜ್ಞಾನವನ್ನು ಪ್ರಾಯೋಗಿಕವಾಗಿ ತಿಳಿಸಲು ಶ್ರಮಿಸುತ್ತಿದೆ.
ಇದಕ್ಕಾಗಿ ಪ್ರತಿ ವಿದ್ಯಾರ್ಥಿ ಮೇಲೆ ₹ 500 ವೆಚ್ಚ  ಮಾಡುತ್ತಿದೆ. ಗ್ರಾಮೀಣ ಭಾಗದ  5ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ  ವಿಜ್ಞಾನದ ಪ್ರಯೋಗಗಳಿಗಾಗಿ ಮೊಬೈಲ್ ಲ್ಯಾಬ್‌ ಅನ್ನು ಬಳಕೆಗೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.