ADVERTISEMENT

ಬಿಟ್‌ ಕಾಯಿನ್‌ ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST

ಬೆಂಗಳೂರು: ಮಲೇಷ್ಯಾ ಮೂಲದ ಬೆಲ್‍ಫ್ರಿಕ್ಸ್ ಸಂಸ್ಥೆಯು  ಬಿಟ್‌ಕಾಯಿನ್‌ ವಿನಿಮಯ  ಸೇವೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಿದೆ. ಬಿಟ್‌ ಕಾಯಿನ್‌ಗಳನ್ನು ರೂಪಾಯಿಯಲ್ಲಿ ಕೊಳ್ಳುವ ಮತ್ತು ಮಾರಾಟ ಮಾಡುವ ಸೇವೆಯನ್ನು ಸಂಸ್ಥೆ ಒದಗಿಸಲಿದೆ.

‘ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಬಿಟ್‌ ಕಾಯಿನ್‌  ಬಳಕೆ ಕ್ರಮೇಣ ಬೆಳೆಯುತ್ತಿದೆ. ನೋಟುಗಳ ಅಮಾನ್ಯೀಕರಣದಿಂದ ಡಿಜಿಟಲ್ ಕರೆನ್ಸಿ ಕುರಿತು ಆಸಕ್ತಿ  ಹಲವು ಪಟ್ಟು ಹೆಚ್ಚಾಗುತ್ತಿದೆ. ಬಿಟ್‌ಕಾಯಿನ್‌ ವಿನಿಮಯ ಸೌಲಭ್ಯವನ್ನು ಸಂಸ್ಥೆಯು ಆನ್‌ಲೈನ್‌ ಮತ್ತು  ರಿಟೇಲ್ ವ್ಯಾಪಾರಿಗಳಿಗೆ ಒದಗಿಸುತ್ತದೆ. ಗ್ರಾಹಕರು ಈ ವರ್ತಕರೊಂದಿಗೆ ಬಿಟ್‌ ಕಾಯಿನ್‌ ಮೂಲಕ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ವಹಿವಾಟು ನಡೆಸಬಹುದು’ ಎಂದು ಸಂಸ್ಥೆಯ  ಸಿಇಒ  ಪ್ರವೀಣ್ ಕುಮಾರ್  ತಿಳಿಸಿದರು.

ಏನಿದು ಬಿಟ್ ಕಾಯಿನ್?: ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿ ಇರುವ ಕರೆನ್ಸಿಗಳಿಗೆ (ಡಾಲರ್, ಪೌಂಡ್ , ರೂಪಾಯಿ) ಪರ್ಯಾ­ಯವಾಗಿ ಡಿಜಿಟಲ್ ರೂಪದಲ್ಲಿ ಇರುವ ಮತ್ತು ಇಂಟರ್‌ನೆಟ್‌ನಲ್ಲಿ ಮಾತ್ರ ವಹಿವಾಟು ನಡೆಸಬಹುದಾದ ಕರೆನ್ಸಿ­ಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.