ADVERTISEMENT

ಬ್ಯಾಂಕಿಂಗ್ ಸೇವೆ 9 ದಿನ ಅಲಭ್ಯ

ಸರಣಿ ರಜೆ; ಪರ್ಯಾಯ ವ್ಯವಸ್ಥೆಗೆ ಅಸೋಚಾಂ ಮನವಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:30 IST
Last Updated 26 ಮಾರ್ಚ್ 2015, 19:30 IST
ಬ್ಯಾಂಕಿಂಗ್ ಸೇವೆ 9 ದಿನ ಅಲಭ್ಯ
ಬ್ಯಾಂಕಿಂಗ್ ಸೇವೆ 9 ದಿನ ಅಲಭ್ಯ   

ಬೆಂಗಳೂರು: ಬ್ಯಾಂಕ್‌ಗಳ ಸೇವೆ ನಾಳೆ ಯಿಂದ ವಾರಕ್ಕೂ ಅಧಿಕ ಸಮಯ ಗ್ರಾಹಕರಿಗೆ ಅಲಭ್ಯ. ಕಾರಣ, ಹಣಕಾಸು ವರ್ಷಾಂತ್ಯ ಹಾಗೂ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ!

ಮಾ. 28ರಿಂದ ಆರಂಭಿಸಿ ಏ.  5ರ ವರೆಗೂ ಬ್ಯಾಂಕಿಂಗ್‌ ಸೇವೆ ದೊರೆಯ ದಂತಾಗಲಿದೆ. ಹಾಗಾಗಿ, ಕೇಂದ್ರ ಹಣ ಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಮಧ್ಯ ಪ್ರವೇಶಿಸಬೇಕು, ಗ್ರಾಹಕರಿಗೆ ಅನುಕೂಲಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅಸೋಚಾಂ ಮನವಿ ಮಾಡಿದೆ.

9 ದಿನಗಳ ಕಾಲ ಬ್ಯಾಂಕ್‌ಗಳಿಂದ ಸೌಲಭ್ಯ ಲಭ್ಯವಾಗದೇ ಇರುವುದರಿಂದ ವಾಣಿಜ್ಯ ಮತ್ತು ಉದ್ಯಮ ಸಂಸ್ಥೆಗಳಷ್ಟೇ ಅಲ್ಲ, ಸಾಮಾನ್ಯ ಗ್ರಾಹಕರಿಗೂ ಬಹಳ ತೊಂದರೆ ಆಗಲಿದೆ. ಷೇರುಪೇಟೆ ವಹಿ ವಾಟು, ರಫ್ತು-ಆಮದು ಚಟುವಟಿಕೆಗ ಳಿಗೆ ದೊಡ್ಡ ತೊಡಕಾಗಲಿದೆ. ಬ್ಯಾಂಕ್‌ ಖಾತೆ ಮೂಲಕವೇ ವೇತನ ಪಡೆಯುವ ನೌಕರರಿಗೆ ಮಾರ್ಚ್‌ ಸಂಬಳ ಪಡೆಯು ವುದಕ್ಕೆ ಸಮಸ್ಯೆಯಾಗುತ್ತದೆ ಎಂದು ಅಸೋಚಾಂ ಪ್ರಧಾನ ಕಾರ್ಯದರ್ಶಿ ಡಿ.ಎಸ್‌.ರಾವತ್‌ ಪತ್ರಿಕಾ ಹೇಳಿಕೆಯಲ್ಲಿ ಗಮನ ಸೆಳೆದಿದ್ದಾರೆ.

ಚೆಕ್‌, ಡಿಮ್ಯಾಂಡ್‌ ಡ್ರಾಫ್‌, ಆರ್‌ಟಿಜಿ ಎಸ್‌, ನಗದು ಜಮಾ ಮೊದಲಾದ ಸೇವೆ ಗಳು ಲಭ್ಯವಾಗದೇ ಹಣಕಾಸು ವ್ಯವಹಾ ರದಲ್ಲಿ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತವೆ. ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸಲು ಪರ್ಯಾಯ ವ್ಯವಸ್ಥೆ ಮಾಡಲು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡುವಂತೆ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಮನವಿ ಮಾಡಿದ್ದೇನೆ ಎಂದಿದ್ದಾರೆ.

ನಗರಗಳಲ್ಲಿ ಸಾಕಷ್ಟು ಎಟಿಎಂ ಘಟಕಗಳಿದ್ದರೂ ಕೆಲವೇ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿವೆ. ಪಟ್ಟಣ, ಗ್ರಾಮೀಣ ಭಾಗದ ಗ್ರಾಹಕರಿಗೆ ಎಟಿಎಂ ಸೇವೆ ಸಮ ರ್ಪಕವಾಗಿಲ್ಲ. ಎಟಿಎಂಗಳಿಂದ ಮಿತವಾಗಿ ಹಣ ತೆಗೆಯಲಷ್ಟೆ ಅವಕಾಶ. ಒಂದೊಮ್ಮೆ ಎಟಿಎಂಗಳಿಗೆ ನಗದು ಭರ್ತಿ ಮಾಡುವ ವ್ಯವಸ್ಥೆಯಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಹೋದರೆ ಇಲ್ಲಿಯೂ ಸಹ ಗ್ರಾಹಕರಿಗೆ ಸಮಸ್ಯೆಯೇ ಎದುರಾಗಲಿದೆ ಎಂದು ಅವರು ಸಮಸ್ಯೆಗಳ ಚಿತ್ರಣವನ್ನು ವಿವಿಧ ಕೋನಗಳಿಂದ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.