ADVERTISEMENT

ಬ್ಯಾಂಕ್‌ ಆಫ್‌ ಇಂಡಿಯಾ ಸಾಲದ ಬಡ್ಡಿ ಕಡಿತ

​ಪ್ರಜಾವಾಣಿ ವಾರ್ತೆ
Published 2 ಮೇ 2015, 19:30 IST
Last Updated 2 ಮೇ 2015, 19:30 IST

ನವದೆಹಲಿ (ಪಿಟಿಐ): ಬ್ಯಾಂಕ್‌ ಆಫ್‌ ಇಂಡಿಯಾ  ಬಡ್ಡಿದರವನ್ನು ಶೇ 0.25 ರಷ್ಟು ಕಡಿತ ಮಾಡಿದೆ. ಇದರಿಂದ ಸಾಲಗಳ ಮೇಲಿನ ಬಡ್ಡಿದರ ಶೇ 10.20 ರಿಂದ ಶೇ9.95ಕ್ಕೆ ಇಳಿಕೆಯಾಗಿದೆ.

ಪರಿಷ್ಕೃತ ಬಡ್ಡಿದರ ಮೇ 4ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ. ಇದರಿಂದ ಗೃಹ, ವಾಹನ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿಯಲ್ಲಿ ಅಲ್ಪ ಇಳಿಕೆಯಾಗಲಿದೆ.

ಭಾರತೀಯ ಸ್ಟೇಟ್‌  ಬ್ಯಾಂಕ್‌ (ಎಸ್‌ಬಿಐ) ಸೇರಿದಂತೆ, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಶೇ 0.15 ರಿಂದ ಶೇ 0.25ರವರೆಗೆ ಬಡ್ಡಿದರ ಇಳಿಕೆ ಮಾಡಿವೆ.

2015ರಲ್ಲಿ ಆರ್‌ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ (ರೆಪೊ ದರ) ಒಟ್ಟು ಶೇ 0.50ರಷ್ಟು ತಗ್ಗಿಸಿದೆ. ಹೀಗಾಗಿ ಬ್ಯಾಂಕುಗಳೂ ಬಡ್ಡಿದರ ಇಳಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.