ADVERTISEMENT

ಭಾರತಕ್ಕೆ ‘ಬಿಎಎ2’ ರೇಟಿಂಗ್‌ ನೀಡಿದ ‘ಮೂಡೀಸ್‌’

13 ವರ್ಷಗಳ ಬಳಿಕ ಭಾರತದ ರೇಟಿಂಗ್ ಉನ್ನತೀಕರಣ

ಏಜೆನ್ಸೀಸ್
Published 17 ನವೆಂಬರ್ 2017, 8:21 IST
Last Updated 17 ನವೆಂಬರ್ 2017, 8:21 IST
ಭಾರತಕ್ಕೆ ‘ಬಿಎಎ2’ ರೇಟಿಂಗ್‌ ನೀಡಿದ ‘ಮೂಡೀಸ್‌’
ಭಾರತಕ್ಕೆ ‘ಬಿಎಎ2’ ರೇಟಿಂಗ್‌ ನೀಡಿದ ‘ಮೂಡೀಸ್‌’   

ಮುಂಬೈ: ಜಾಗತಿಕ ಮಟ್ಟದ ರೇಟಿಂಗ್‌ ಏಜೆನ್ಸಿ ‘ಮೂಡೀಸ್‌’ ಭಾರತದ ದೇಶೀಯ ಮತ್ತು ಅಂತರರಾಷ್ಟ್ರೀಯ ಹಣಕಾಸು ಸ್ಥಿತಿಗತಿಯ ರೇಟಿಂಗ್ ಅನ್ನು ಉನ್ನತೀಕರಿಸಿದ್ದು ಭಾರತಕ್ಕೆ ‘ಬಿಎಎ2’ ರೇಟಿಂಗ್‌ ನೀಡಿದೆ.

‘ಮೂಡೀಸ್‌’ 13 ವರ್ಷಗಳ ಬಳಿಕ ಭಾರತದ ರೇಟಿಂಗ್ ಉನ್ನತೀಕರಿಸಿದೆ. 2004ರಲ್ಲಿ ‘ಮೂಡೀಸ್‌’ ಭಾರತಕ್ಕೆ ‘ಬಿಎಎ3’ ರೇಟಿಂಗ್ ನೀಡಿತ್ತು.

‘ನೋಟು ರದ್ಧತಿ, ಜಿಎಸ್‌ಟಿ ಜಾರಿ, ಬ್ಯಾಂಕ್‌ ಖಾತೆಗಳಿಗೆ ಹಾಗೂ ಸರ್ಕಾರದ ಸೌಲಭ್ಯಗಳಿಗೆ ಆಧಾರ್ ಜೋಡಣೆಯಂಥ ಸರ್ಕಾರದ ಕ್ರಮಗಳು ಭಾರತದ ಆರ್ಥಿಕ ಅಭಿವೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ’ ಎಂದು ‘ಮೂಡೀಸ್‌’ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.