ADVERTISEMENT

ಭಾರತದಲ್ಲಿ ಖಾಸಗಿ ಬ್ಯಾಂಕಿಂಗ್‌ ವಹಿವಾಟು ನಿಲ್ಲಿಸಿದ ‘ಎಚ್‌ಎಸ್‌ಬಿಸಿ'

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 13:35 IST
Last Updated 27 ನವೆಂಬರ್ 2015, 13:35 IST

ಮುಂಬೈ (ಪಿಟಿಐ): ಪ್ರಮುಖ ವಿದೇಶಿ ಬ್ಯಾಂಕ್‌ ‘ಎಚ್‌ಎಸ್‌ಬಿಸಿ’ ಭಾರತದಲ್ಲಿನ ತನ್ನ ಖಾಸಗಿ ಬ್ಯಾಂಕಿಂಗ್‌ ವಹಿವಾಟನ್ನು ಸ್ಥಗಿತಗೊಳಿಸಿರುವುದಾಗಿ  ಶುಕ್ರವಾರ ಹೇಳಿದೆ. 2016ರ ಮಾರ್ಚ್‌ನಲ್ಲಿ ವಹಿವಾಟು ಸಂಪೂರ್ಣವಾಗಿ ಕೊನೆಗೊಳ್ಳಲಿದೆ.

ರಾಯಲ್‌ ಬ್ಯಾಂಕ್‌ ಆಫ್‌ ಸ್ಕಾಟ್ಲೆಂಡ್‌  ಕೂಡ ಎರಡು ತಿಂಗಳ ಹಿಂದಷ್ಟೇ ಭಾರತದಲ್ಲಿನ  ಖಾಸಗಿ ಬ್ಯಾಂಕಿಂಗ್‌ ವಹಿವಾಟನ್ನು ಸ್ಥಗಿತಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಎಚ್‌ಎಸ್‌ಬಿಸಿಯ ಖಾಸಗಿ ಬ್ಯಾಂಕಿಂಗ್‌ ವಹಿವಾಟಿನಲ್ಲಿ ಪ್ರಮುಖವಾಗಿ ‘ಸಂಪತ್ತು ನಿರ್ವಹಣೆ ಸೇವೆ’ ಸೇರಿದೆ.  ಈ ವಿಭಾಗದಲ್ಲಿದ್ದ ಸುಮಾರು 70  ಮಂದಿ ನೌಕರರನ್ನು ರಿಟೇಲ್‌ ವಿಭಾಗದಲ್ಲಿ ವಿಲೀನಗೊಳಿಸಲಾಗಿದೆ ಎಂದು ಬ್ಯಾಂಕಿನ ವಕ್ತಾರರೊಬ್ಬರು ಇಲ್ಲಿ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ವಹಿವಾಟು ಸ್ಥಗಿತಗೊಳಿಸುತ್ತಿರುವುದಾಗಿ ಬ್ಯಾಂಕ್‌ ತನ್ನ ನೌಕರರಿಗೆ ಶುಕ್ರವಾರ ಬೆಳಿಗ್ಗೆಯಷ್ಟೇ ಇ–ಮೇಲ್  ಮೂಲಕ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT