ADVERTISEMENT

ಮಂಗಳೂರಿನಿಂದ ಚೆನ್ನೈಗೆ ವಿಮಾನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:41 IST
Last Updated 19 ಅಕ್ಟೋಬರ್ 2017, 19:41 IST
ಮಂಗಳೂರಿನಿಂದ ಚೆನ್ನೈಗೆ ವಿಮಾನ
ಮಂಗಳೂರಿನಿಂದ ಚೆನ್ನೈಗೆ ವಿಮಾನ   

ಮಂಗಳೂರು: ಇಂಡಿಗೊ ವಿಮಾನಯಾನ ಸಂಸ್ಥೆ ಪ್ರಾದೇಶಿಕ ಮಾರುಕಟ್ಟೆಗಳಿಗೆ ತನ್ನ ಪ್ರವೇಶವನ್ನು ಪ್ರಕಟಿಸಿದೆ.

ತನ್ನ ಕಾರ್ಯ ನಿರ್ವಹಣೆಯನ್ನು ಈಗಿನ ಜಾಲದಲ್ಲಿ ಹೈದರಾಬಾದ್, ಚೆನ್ನೈ, ಬೆಂಗಳೂರು, ಮಂಗಳೂರು, ಮದುರೆ ಮತ್ತು ನಾಗಪುರಗಳ ನಡುವೆ ಮತ್ತು ಎರಡನೇ ಹಂತದ (2 ಟೈಯರ್) ನಗರಗಳಾದ ತಿರುಪತಿ ಮತ್ತು ರಾಜಮಹೇಂದ್ರಿಗಳಿಗೆ ವಿಮಾನ ಯಾನ ಆರಂಭಿಸಲಿದೆ.

ಈ ನಗರಗಳ ನಡುವೆ ಸಂಪರ್ಕವನ್ನು ಹೆಚ್ಚಿಸಲು ಎಟಿಆರ್ 72-600 ವಿಮಾನಗಳನ್ನು ಹಂತ ಹಂತವಾಗಿ ನಿಯೋಜಿಸಲಿದೆ.

ADVERTISEMENT

ಇಂಡಿಗೊ ಈ ಹೊಸ ಮಾರ್ಗಗಳಿಗೆ ಪ್ರಾರಂಭಿಕ ದರ ₹999 ನಿಗದಿಪಡಿಸಿದ್ದು, ಸೋಮವಾರ ಮಧ್ಯರಾತ್ರಿಯಿಂದ ಬುಕಿಂಗ್‌ ಪ್ರಾರಂಭವಾಗಿದೆ. ಮೊದಲ ವಿಮಾನಯಾನ ಹೈದರಾಬಾದ್‌ನಿಂದ ಡಿಸೆಂಬರ್ 21ರಿಂದ ಪ್ರಾರಂಭವಾಗಲಿದೆ.

ಇಂಡಿಗೊದ ಮೊದಲ ಪ್ರಾದೇಶಿಕ ಸೇವೆಯ ವಿಮಾನಗಳ ಟಿಕೆಟ್‌ಗಳ ಮಾರಾಟವನ್ನು ಪ್ರಕಟಿಸಿದ ಇಂಡಿಗೊದ ಅಧ್ಯಕ್ಷ ಮತ್ತು ಪೂರ್ಣಕಾಲಿಕ ನಿರ್ದೇಶಕ ಆದಿತ್ಯ ಘೋಷ್, ‘ಇಂಡಿಗೊ ಮೂಲಕ ಜನರನ್ನು ಮತ್ತು ಸ್ಥಳಗಳನ್ನು ಹತ್ತಿರಕ್ಕೆ ತರುತ್ತಿದ್ದೇವೆ. ಈ ವಿಮಾನಗಳು ಹೊಸ ಮಾರುಕಟ್ಟೆಯನ್ನು ತೆರೆಯಲಿವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.