ADVERTISEMENT

ಮನೆ ಖರೀದಿಗೆ ಶೇ 90ರಷ್ಟು ಪಿಎಫ್‌ ಹಣ ಪಡೆಯಲು ಅವಕಾಶ

ಪಿಟಿಐ
Published 24 ಏಪ್ರಿಲ್ 2017, 19:31 IST
Last Updated 24 ಏಪ್ರಿಲ್ 2017, 19:31 IST

ನವದೆಹಲಿ: ಮನೆ ಖರೀದಿಯ ಮುಂಗಡ ಪಾವತಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಸದಸ್ಯರು ಇನ್ನು ಮುಂದೆ ತಮ್ಮ  ಖಾತೆಯಿಂದ ಒಂದು ಬಾರಿಗೆ ಶೇ 90ರಷ್ಟು ಹಣ ಮರಳಿ ಪಡೆಯಬಹುದಾಗಿದೆ.

ಮನೆ ಖರೀದಿಗೆ ಮಾಡುವ ಸಾಲದ  ತಿಂಗಳ ಸಮಾನ ಕಂತನ್ನು (ಇಎಂಐ)   ಪಿಎಫ್‌ ಖಾತೆಯಿಂದಲೇ ಪಾವತಿಸಲೂ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ‘ಇಪಿಎಫ್‌ಒ’ ಅಗತ್ಯ ತಿದ್ದುಪಡಿ ಮಾಡಿದೆ.

ಹೊಸ ಸೌಲಭ್ಯದಡಿ, ಪಿಎಫ್‌ ಚಂದಾದಾರರು ಮನೆ, ಫ್ಲ್ಯಾಟ್‌, ನಿವೇಶನ ಖರೀದಿಸಲು ತಮ್ಮ ಭವಿಷ್ಯ ನಿಧಿ ಖಾತೆಯಲ್ಲಿನ ಮೊತ್ತದ ಶೇ 90ರಷ್ಟು ಹಣವನ್ನು ಬಳಸಿಕೊಳ್ಳಬಹುದು.

ADVERTISEMENT

ಸರ್ಕಾರ, ಬ್ಯಾಂಕ್‌ ಮತ್ತು ಗೃಹ ಸಾಲ ನೀಡುವ ಪ್ರಮುಖ ಸಂಸ್ಥೆಗಳಿಂದ ಪಡೆದ  ಸಾಲದ ‘ಇಎಂಐ’ಗೂ ಪಿಎಫ್‌ ಖಾತೆಯಿಂದಲೇ ಹಣ ಪಾವತಿಸಬಹುದಾಗಿದೆ.

ಈ   ಸೌಲಭ್ಯ ಪಡೆಯಲು ಕೆಲ ನಿಬಂಧನೆಗಳಿವೆ. ಕನಿಷ್ಠ ಮೂರು ವರ್ಷಗಳಿಂದ ಚಂದಾದಾರರಾಗಿರಬೇಕು. ಜೀವಮಾನದಲ್ಲಿ ಒಂದು ಬಾರಿ ಮಾತ್ರ ಬಳಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.