ADVERTISEMENT

ಮನೆ ಖರೀದಿ: ಇಪಿಎಫ್‌ ಯೋಜನೆಯಲ್ಲಿ ಬದಲಾವಣೆ

ಪಿಟಿಐ
Published 17 ಮಾರ್ಚ್ 2017, 19:30 IST
Last Updated 17 ಮಾರ್ಚ್ 2017, 19:30 IST

ನವದೆಹಲಿ: ಭವಿಷ್ಯ ನಿಧಿ (ಪಿಎಫ್) ಚಂದಾದಾರರು ಮನೆ ಖರೀದಿಸಲು ಅನುಕೂಲ ಮಾಡಿಕೊಡಲು  ಕೇಂದ್ರ ಸರ್ಕಾರ ಇಪಿಎಫ್‌ ಯೋಜನೆಯಲ್ಲಿ ಬದಲಾವಣೆ ತರಲು ಮುಂದಾಗಿದೆ.

‘ಮನೆ ಖರೀದಿಸುವಾಗ ಮುಂಗಡ ಪಾವತಿಸಲು ಇಪಿಎಫ್‌ ಖಾತೆಯಿಂದ ಶೇ 90ರಷ್ಟು ಹಣ ಪಡೆಯಲು ಮತ್ತು ಗೃಹ ಸಾಲದ ತಿಂಗಳ ಕಂತನ್ನು ಪಾವತಿಸಲು ಇಪಿಎಫ್‌ ಖಾತೆ ಬಳಸಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

ಆದರೆ, ಈ ಸೌಲಭ್ಯಗಳನ್ನು ಪಡೆಯಲು ಚಂದಾದಾರರು ಕನಿಷ್ಠ 10 ಸದಸ್ಯರಿರುವ ಒಂದು ಸಹಕಾರಿ ಸಂಘ ರಚನೆ ಮಾಡಿಕೊಳ್ಳುವುದು ಕಡ್ಡಾಯ’ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ‌‌ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

1952ರ ಕಾರ್ಮಿಕರ ಭವಿಷ್ಯ ನಿಧಿ ಯೋಜನೆಯಲ್ಲಿ ಬದಲಾವಣೆ ತರುವ ಮೂಲಕ ಈ ಸೌಲಭ್ಯಗಳನ್ನು ಸೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT