ADVERTISEMENT

ಮರ್ಸಿಡಿಸ್‌ ಬೆಂಜ್‌ ಆರಂಭಿಸಿದೆ ‘ಲಕ್ಸೆಫೆಸ್ಟ್‌ 2014’

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2014, 19:30 IST
Last Updated 20 ಆಗಸ್ಟ್ 2014, 19:30 IST

ಬೆಂಗಳೂರು: ಮರ್ಸಿಡಿಸ್‌ ಬೆಂಜ್‌ ಇಂಡಿಯ ದೇಶದ ವಿವಿಧೆಡೆಯ ಷೋರೂಂ ಗಳಲ್ಲಿ ‘ಲಕ್ಸೆಫೆಸ್ಟ್‌ 2014’ ಹೆಸರಿನಲ್ಲಿ ಪ್ರಮುಖ ಐಶಾರಾಮಿ ಬ್ರ್ಯಾಂಡ್‌ಗಳನ್ನು ಒಂದೆಡೆ ತಂದು ಗ್ರಾಹಕರಿಗೆ ಬಹುಮಾನಗಳ ಕೊಡುಗೆ ನೀಡಲು ಮುಂದಾಗಿದೆ.

ಮರ್ಸಿಡೆಸ್‌ ಬೆಂಜ್‌ ಷೋರೂಂಗೆ ‘ಲಕ್ಸೆಫೆಸ್ಟ್‌’ ವೇಳೆ ಭೇಟಿ ನೀಡುವ ಗ್ರಾಹಕ ರಿಗೆ ಪ್ರಮುಖ ಬ್ರ್ಯಾಂಡ್‌ಗಳಾದ ಜೆಡಬ್ಲ್ಯು ಮ್ಯಾರಿಯಟ್‌, ಸ್ವಿಸ್‌ ಇಂಟರ್‌ ನ್ಯಾಷ ನಲ್‌ ಏರ್‌ಲೈನ್ಸ್‌ ಮತ್ತು ಕಾರ್ಲ್‌ ಎಫ್‌ ಬುಷರೆರ್‌ ಕಂಪೆನಿಗಳು ಲಕ್ಕಿಡ್ರಾ ಮೂಲಕ ವೈಯಕ್ತಿಕ ಶೈಲಿಯ ಸ್ಮರಣಿಕೆಗಳ ಬಹುಮಾನವನ್ನು ನೀಡಲಿವೆ.

ಬುಧ ವಾರ ಆರಂಭಗೊಂಡಿರುವ ಈ ಐಶಾರಾಮಿ ಉತ್ಸವ ಆ. 31ರವರೆಗೂ ನಡೆಯ ಲಿದೆ ಎಂದು ಮರ್ಸಿಡಿಸ್‌ ಬೆಂಜ್‌ ಇಂಡಿಯದ ವ್ಯವಸ್ಥಾಪಕ ನಿರ್ದೇಶಕ ಎಬೆ ರ್ಹಾರ್ಡ್‌ ಕೆರ್ನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.