ADVERTISEMENT

ಮಲ್ಯ ವಿಮಾನ: ಆ.18ಕ್ಕೆ ಹರಾಜು ಯತ್ನ

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST
ವಿಜಯ್ ಮಲ್ಯ
ವಿಜಯ್ ಮಲ್ಯ   

ಮುಂಬೈ (ಪಿಟಿಐ): ಬಾಕಿ ಹಣ ವಸೂಲಿಗಾಗಿ ಉದ್ಯಮಿ ವಿಜಯ್ ಮಲ್ಯ ಅವರ ಖಾಸಗಿ ವಿಮಾನವನ್ನು ಆಗಸ್ಟ್‌ 18ರಂದು ಮರು ಹರಾಜು ಹಾಕಲು ಸೇವಾ ತೆರಿಗೆ ಇಲಾಖೆ ಮುಂದಾಗಿದೆ.

ಈ ಮೊದಲು ಹರಾಜು ಹಾಕಲು ಇಲಾಖೆ ಕೈಗೊಂಡಿದ್ದ ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು. ‘ಇ–ಹರಾಜಿ’ಗೆ ಯುಎಇ ಮೂಲದ ಅಲ್ನಾ ಫೈನಾನ್ಸ್‌ ಹೋಲ್ಡಿಂಗ್ಸ್‌ ಕೇವಲ ₹ 1.09 ಕೋಟಿಗಳನ್ನಷ್ಟೇ ಬಿಡ್‌ ಮಾಡಿತ್ತು. ಇದು ಹರಾಜಿಗೆ ನಿಗದಿ ಮಾಡಿದ್ದ ಕನಿಷ್ಠ ಬಿಡ್‌ ಮೊತ್ತವಾದ ₹ 152 ಕೋಟಿಗಳಿಗಿಂತ ತುಂಬ ಕಡಿಮೆ ಇತ್ತು. ಹೀಗಾಗಿ ಹರಾಜು ಪ್ರಕ್ರಿಯೆ ವಿಫಲವಾಗಿತ್ತು. ಹೀಗಾಗಿ ಮತ್ತೊಮ್ಮೆ ಹರಾಜು ಹಾಕಲು ನಿರ್ಧರಿಸಲಾಗಿದೆ.

ಕಿಂಗ್‌ಫಿಷರ್‌ ಏರ್‌ಲೈನ್ಸ್‌ನಿಂದ ₹ 800 ಕೋಟಿಗಳಷ್ಟು ತೆರಿಗೆ ಬಾಕಿ ವಸೂಲಿಗೆ ಸೇವಾ ತೆರಿಗೆ ಇಲಾಖೆಯು 2013ರ ಡಿಸೆಂಬರ್‌ನಲ್ಲಿಯೇ ಈ ಖಾಸಗಿ ವಿಮಾನವನ್ನು ಮುಟ್ಟುಗೋಲು ಹಾಕಿಕೊಂಡಿತ್ತು.  ‘ಮಿನಿ ರತ್ನ’  ಕೇಂದ್ರೋದ್ಯಮ ಎಂಎಸ್‌ಟಿಸಿ ಲಿಮಿಟೆಡ್‌ ಮೂಲಕ, ಸೇವಾ ತೆರಿಗೆ ಇಲಾಖೆಯು ಈ ವಿಮಾನದ ಹರಾಜು ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.