ADVERTISEMENT

ಮಹೀಂದ್ರಾ ಚಾಲಕರಹಿತ ಟ್ರ್ಯಾಕ್ಟರ್‌

ಪಿಟಿಐ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ಮಹೀಂದ್ರಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಪವನ್‌ ಗೋಯೆಂಕಾ ಅವರು ಚೆನ್ನೈನಲ್ಲಿ ಇರುವ ಮಹೀಂದ್ರಾದ ಸಂಶೋಧನಾ ಘಟಕದಲ್ಲಿ ಅಭಿವೃದ್ಧಿಪಡಿಸಿರುವ ಚಾಲಕರಹಿತ ಟ್ರ್ಯಾಕ್ಟರ್‌ ಮಾದರಿ ಪರಿಚಯಿಸಿದರು –ಪಿಟಿಐ ಚಿತ್ರ
ಮಹೀಂದ್ರಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಪವನ್‌ ಗೋಯೆಂಕಾ ಅವರು ಚೆನ್ನೈನಲ್ಲಿ ಇರುವ ಮಹೀಂದ್ರಾದ ಸಂಶೋಧನಾ ಘಟಕದಲ್ಲಿ ಅಭಿವೃದ್ಧಿಪಡಿಸಿರುವ ಚಾಲಕರಹಿತ ಟ್ರ್ಯಾಕ್ಟರ್‌ ಮಾದರಿ ಪರಿಚಯಿಸಿದರು –ಪಿಟಿಐ ಚಿತ್ರ   

ನವದೆಹಲಿ: ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪೆನಿಯ ಚಾಲಕ ರಹಿತ ಟ್ರ್ಯಾಕ್ಟರ್‌ ಮುಂದಿನ ವರ್ಷ ದೇಶದ ಮಾರುಕಟ್ಟೆ ಪ್ರವೇಶಿಸಲಿದೆ.

ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಪವನ್‌ ಗೋಯೆಂಕಾ ಅವರು ಟ್ರ್ಯಾಕ್ಟರ್‌ನ ಮಾದರಿಯನ್ನು ಪ್ರದರ್ಶಿಸಿದರು.

ಚೆನ್ನೈನಲ್ಲಿರುವ ಘಟಕದಲ್ಲಿ ಈ ಟ್ರ್ಯಾಕ್ಟರ್‌ ಅಭಿವೃದ್ಧಿಪಡಿಸಲಾಗಿದೆ. 20 ಎಚ್‌ಪಿಯಿಂದ 100 ಎಚ್‌ಪಿವರೆಗಿನ ಟ್ರ್ಯಾಕ್ಟರ್‌ಗಳಲ್ಲಿ ಈ ಚಾಲಕ ರಹಿತ ತಂತ್ರಜ್ಞಾನ ಅಳವಡಿಸಲಾಗುತ್ತಿದೆ.

ADVERTISEMENT

‘ಈ ತಂತ್ರಜ್ಞಾನದಿಂದ ಕೃಷಿ ಚಟುವಟಿಕೆಯಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಬಳಕೆಯಿಂದ ಉತ್ಪಾದನೆ ಹೆಚ್ಚಾಗಲಿದ್ದು, ಜಗತ್ತಿನಲ್ಲಿ ಹೆಚ್ಚುತ್ತಿರುವ  ಆಹಾರ ಬೇಡಿಕೆ ಪೂರೈಸಲು ಸಾಧ್ಯವಾಗಲಿದೆ’ ಎಂದು ಗೋಯೆಂಕಾ ಅಭಿಪ್ರಾಯಪಟ್ಟಿದ್ದಾರೆ.

‘ಈ ಟ್ರ್ಯಾಕ್ಟರ್‌ ಆಧುನಿಕ ತಂತ್ರಜ್ಞಾನ ಹೊಂದಿರುವುದರಿಂದ ಭಾರತದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಕಂಪೆನಿ ಅಧ್ಯಕ್ಷ ರಾಜೇಶ್‌ ಜೆಜುರಿಕರ್‌ ತಿಳಿಸಿದ್ದಾರೆ.

‘ಜಪಾನ್‌ ಮತ್ತು ಅಮೆರಿಕದಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೂ ಕೊಂಡೊಯ್ಯುವ ಮೂಲಕ ಪೈಪೋಟಿ ನೀಡಲಾಗುವುದು’ ಎಂದು ಹೇಳಿದ್ದಾರೆ.

ಆಟೋಗಿಯರ್‌, ಆಟೊ ಹೆಡ್‌ಲ್ಯಾಂಡ್ ಟರ್ನ್, ರಿಮೋಟ್‌ ಎಂಜಿನ್‌ ಸ್ಟಾರ್ಟ್‌, ಸ್ಟಾಪ್‌ ಆಯ್ಕೆ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.