ADVERTISEMENT

ಮಾವು: ಅಧಿಕ ಫಸಲು ಬೆಲೆಯಲ್ಲಿ ಸ್ಥಿರತೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST
ಮಾವು: ಅಧಿಕ ಫಸಲು ಬೆಲೆಯಲ್ಲಿ ಸ್ಥಿರತೆ ನಿರೀಕ್ಷೆ
ಮಾವು: ಅಧಿಕ ಫಸಲು ಬೆಲೆಯಲ್ಲಿ ಸ್ಥಿರತೆ ನಿರೀಕ್ಷೆ   

ನವದೆಹಲಿ (ಪಿಟಿಐ): ಜೂನ್‌ಗೆ ಅಂತ್ಯ ವಾಗುವ 2015–16ನೇ ಬೆಳೆ ವರ್ಷದಲ್ಲಿ, ಮಾವು ಫಸಲು ಶೇ 2.1ರಷ್ಟು ಹೆಚ್ಚಾಗಲಿದ್ದು, 19 ಲಕ್ಷ ಟನ್‌ಗಳಿಗೆ ತಲುಪಲಿದೆ. ಹೀಗಾಗಿ ಈ ಬಾರಿ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರು ಮಂಗಳವಾರ ಲೋಕಸಭೆಗೆ ತಿಳಿಸಿದರು.

ಕಳೆದ ವರ್ಷ ಇದೇ ಅವಧಿಯಲ್ಲಿ 18.52 ಲಕ್ಷ ಟನ್‌ ಫಸಲು ಬಂದಿತ್ತು.

ಅಕಾಲಿಕ ಮಳೆಯಿಂದ ತೆಲಂಗಾಣ ದಲ್ಲಿ ಈ ಬಾರಿ ಫಸಲು ಕಡಿಮೆಯಾಗಲಿದೆ. ಉಳಿದಂತೆ ಎಲ್ಲಾ ರಾಜ್ಯಗಳಲ್ಲಿ ಫಸಲು ಕಳೆದ ವರ್ಷದಷ್ಟೇ  ಅಥವಾ ಅದಕ್ಕೂ ಉತ್ತಮವಾಗಿರಲಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿ ಬೆಳೆಯುವ ಒಟ್ಟು ಮಾವಿನ ಹಣ್ಣಿನಲ್ಲಿ ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದ ಪಾಲೇ ಅರ್ಧದಷ್ಟಿದೆ. ಒಂದು ಸಾವಿರಕ್ಕೂ ಹೆಚ್ಚಿನ ವಿವಿಧ ತಳಿಯ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಯುಎಇಗೆ ಅತಿ ಹೆಚ್ಚು ಮಾವು ರಫ್ತಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.