ADVERTISEMENT

ಮಾ.22ಕ್ಕೆ ಶಂಕರ ಕಂಪೆನಿ ಐಪಿಒ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 19:30 IST
Last Updated 18 ಮಾರ್ಚ್ 2017, 19:30 IST

ಬೆಂಗಳೂರು: ಕಟ್ಟಡ ನಿರ್ಮಾಣ ಸಾಮಗ್ರಿ ಪೂರೈಸುವ ಬೆಂಗಳೂರು ಮೂಲದ ಶಂಕರ ಕಂಪೆನಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಬುಧವಾರ (ಮಾ. 22) ಷೇರುಪೇಟೆ ಪ್ರವೇಶಿಸಲಿದೆ.

ಷೇರು ಮಾರಾಟದ ಮೂಲಕ ಸಾರ್ವಜನಿಕರಿಂದ ಬಂಡವಾಳ ₹350–₹400 ಕೋಟಿ ಸಂಗ್ರಹ ಗುರಿ ಹೊಂದಿದೆ. ಷೇರುಗಳ ಮಾರಾಟ ಮಾರ್ಚ್‌ 22 ರಿಂದ  ಆರಂಭವಾಗಲಿದೆ. ಮಾರ್ಚ್‌ 24ಕ್ಕೆ ಮುಕ್ತಾಯವಾಗಲಿದೆ. ಮಾರ್ಚ್ 21ರಂದು ಷೇರು ಖರೀದಿಗೆ ಬಿಡ್‌ ಸಲ್ಲಿಸಬಹುದಾಗಿದ್ದು, ಒಂದು ಬಾರಿ ಬಿಡ್‌ನಲ್ಲಿ 32 ಷೇರುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ಆರಂಭಿಕ ಕೊಡುಗೆಯಾಗಿ ₹10ರ ಮುಖಬೆಲೆ ಷೇರುಗಳನ್ನು ತಲಾ ₹440 ರಿಂದ ₹460 ಬೆಲೆಯಲ್ಲಿ  ಬಿಡುಗಡೆ ಮಾಡುವುದಾಗಿ ಕಂಪೆನಿಯ
ಸಂಸ್ಥಾಪಕ ಸುಕುಮಾರ್‌ ಶ್ರೀನಿವಾಸನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಐಡಿಎಫ್‌ಸಿ ಬ್ಯಾಂಕ್‌ ಲಿಮಿಟೆಡ್‌, ಇಕ್ವಿರಸ್‌ ಕ್ಯಾಪಿಟಲ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌. ಷೇರು ವಹಿವಾಟು ನಿರ್ವಹಿಸಲಿವೆ. ಶಂಕರ ಬಿಲ್ಡಿಂಗ್‌ ಪ್ರೊಡಕ್ಟ್ಸ್‌ ಲಿಮಿಟೆಡ್‌ ಹೆಸರಿನಲ್ಲಿ 1995ರಲ್ಲಿ ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದ ಕಂಪೆನಿ ‘ಶಂಕರ ಬಿಲ್ಡ್‌ಪ್ರೊ’ ಹೆಸರಿನಲ್ಲಿ 9 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮಾರಾಟ ಮಳಿಗೆಗಳನ್ನು ಹೊಂದಿದೆ.

74 ಪ್ರಮುಖ ಕಟ್ಟಡ ಸಾಮಗ್ರಿಗಳನ್ನು ಮಳಿಗೆಗಳ ಮೂಲಕ ಮಾರಾಟ ಮಾಡುವ ಕಂಪೆನಿಯು 12 ಸಂಸ್ಕರಣಾ ಘಟಕಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.