ADVERTISEMENT

ಮುಕ್ತ ವೀಸಾ ಹಿಂಪಡೆದ ಹಾಂಕಾಂಗ್‌

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST

ಬೀಜಿಂಗ್‌ (ಪಿಟಿಐ): ಭಾರತೀಯರಿಗೆ ನೀಡಿದ್ದ ಮುಕ್ತ ವೀಸಾ ಸೌಲಭ್ಯವನ್ನು ಹಾಂಕಾಂಗ್‌ ಹಿಂಪಡೆದಿದ್ದು, ಸೋಮವಾರದಿಂದ ಭಾರತೀಯ ಪ್ರಯಾಣಿಕರು ಆನ್‌ಲೈನ್‌ ಮೂಲಕ ಮೊದಲೇ ನೋಂದಣಿ ಮಾಡಿಕೊಂಡು ಪ್ರಯಾಣ ಮಾಡಬೇಕು ಎಂದು ಹಾಂಕಾಂಗ್‌ನ ವಲಸೆ ಇಲಾಖೆ ವೆಬ್‌ಸೈಟ್‌ನಲ್ಲಿ ಘೋಷಿಸಿದೆ.

‘ಭಾರತೀಯ ನಾಗರಿಕರು ಇನ್ನು ಮುಂದೆ ಹಾಂಕಾಂಗ್‌ಗೆ ಬರುವ ಮುನ್ನ ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಹೆಸರು ನೋಂದಣಿ ಮಾಡಿ ಬರಬೇಕು’ ಎಂದು ವೆಬ್‌ಸೈಟ್‌ ಹೇಳಿದೆ. ಈ ಬಗ್ಗೆ ಭಾರತೀಯ ರಾಯಭಾರ ಕಚೇರಿಗೂ ಪತ್ರ ರವಾನಿಸಿದೆ.

ಪ್ರತಿ ವರ್ಷ ಸುಮಾರು ಐದು ಲಕ್ಷ ಭಾರತೀಯರು ಹಾಂಕಾಂಗ್‌ಗೆ ಭೇಟಿನೀಡುತ್ತಿದ್ದು, ಈ ನಿಯಮದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.