ADVERTISEMENT

ಮೊಬೈಲ್‌ ಕರೆ ದರ ಏರಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST

ನವದೆಹಲಿ: ಮೊಬೈಲ್‌ ಫೋನ್ ಸೇವಾ ಸಂಸ್ಥೆ ಗಳು ಮತ್ತೆ ದರಪಟ್ಟಿ ಪರಿಷ್ಕರಿಸಿವೆ. ಉಚಿತವಾಗಿದ್ದ ಕೆಲವು ಸೇವೆಗಳನ್ನೂ ರದ್ದುಪಡಿಸಿವೆ.

ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ಕಾಂ) ಬುಧವಾರ ಪರಿಷ್ಕೃತ ದರಪಟ್ಟಿ ಪ್ರಕಟಿಸಿದ್ದ, ಪ್ರೀಪೇಯ್ಡ್‌ ಸೇವೆಗಳ ದರದಲ್ಲಿ ಶೇ 20ರಷ್ಟು ಏರಿಕೆ ಮಾಡಿದೆ. ಪ್ರತಿ ಸೆಕೆಂಡ್‌ ಕರೆಗೆ ವಿಧಿಸುತ್ತಿದ್ದ 1.5 ಪೈಸೆ ದರವನ್ನು 1.6 ಪೈಸೆಗೆ ಹೆಚ್ಚಿಸಲಾಗಿದೆ. ಹೊಸ ದರಪಟ್ಟಿ ಏ. 25ರಿಂದ ಜಾರಿಗೆ ಬರಲಿದೆ. 

ಏರ್‌ಟೆಲ್‌ ಕಂಪೆನಿ ಈಗಾಗಲೇ ಮೊಬೈಲ್‌ ಕರೆ ದರ ಮತ್ತು ಅಂತರ್ಜಾಲ ಸಂಪರ್ಕ ಸೇವಾ ಶುಲ್ಕವನ್ನು ಏರಿಸಿದೆ. ಇದೇ ವೇಳೆ, ವೊಡಾಫೋನ್‌ ಮತ್ತು ಐಡಿಯಾ ಸೆಲ್ಯುಲರ್‌ ಕಂಪೆನಿ 30 ದಿನಗಳವರೆಗಿದ್ದ ವೋಚರ್‌ಗಳ ವ್ಯಾಲಿಡಿಟಿಯನ್ನು ಈಗ 24 ದಿನಗಳಿಗೆ ಕಡಿತಗೊಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.