ADVERTISEMENT

ಮೊಬೈಲ್‌ ಮೂಲಕವೇ ಹಣ ಪಾವತಿಸುವ ಸಿಂಡ್‌ ಭಾರತ್‌ ಕ್ಯುಆರ್‌ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2017, 19:30 IST
Last Updated 17 ಸೆಪ್ಟೆಂಬರ್ 2017, 19:30 IST
ಸಿಂಡಿಕೇಟ್‌ ಬ್ಯಾಂಕ್‌ನ ಅಧ್ಯಕ್ಷ ಅಜಯ್‌ ವಿಪಿನ್‌ ನಾನಾವತಿ ಅವರು ಮೊಬೈಲ್‌ ಪಾವತಿ ಆ್ಯಪ್‌ ಉದ್ಘಾಟಿಸಿದರು. ಬ್ಯಾಂಕ್‌ನ ಸಿಇಒ ಮೆಲ್ವಿನ್‌ ರೆಗೊ ಉಪಸ್ಥಿತರಿದ್ದರು
ಸಿಂಡಿಕೇಟ್‌ ಬ್ಯಾಂಕ್‌ನ ಅಧ್ಯಕ್ಷ ಅಜಯ್‌ ವಿಪಿನ್‌ ನಾನಾವತಿ ಅವರು ಮೊಬೈಲ್‌ ಪಾವತಿ ಆ್ಯಪ್‌ ಉದ್ಘಾಟಿಸಿದರು. ಬ್ಯಾಂಕ್‌ನ ಸಿಇಒ ಮೆಲ್ವಿನ್‌ ರೆಗೊ ಉಪಸ್ಥಿತರಿದ್ದರು   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್‌ ಬ್ಯಾಂಕ್‌, ಡೆಬಿಟ್‌ ಕಾರ್ಡ್‌ ಇಲ್ಲದೆಯೇ ಮೊಬೈಲ್‌ ಮೂಲಕವೇ ಹಣ ಪಾವತಿಸುವ ಸೌಲಭ್ಯ ಒಳಗೊಂಡಿರುವ ‘ಸಿಂಡ್‌ ಭಾರತ್‌ ಕ್ಯುಆರ್‌ ಮೊಬೈಲ್‌ ಪಾವತಿ ಕಿರುತಂತ್ರಾಂಶ (ಆ್ಯಪ್‌) ಅಭಿವೃದ್ಧಿಪಡಿಸಿದೆ.

ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ ಮೂಲಕವೇ ಹಣ ಪಾವತಿಸಲು ಮತ್ತು ವರ್ತಕರು ಪಾಯಿಂಟ್‌ ಆಫ್‌ ಸೇಲ್‌ (ಪಿಒಎಸ್‌) ಯಂತ್ರ ಬಳಸದೆ ಡಿಜಿಟಲ್‌ ರೂಪದಲ್ಲಿ ಹಣ ಪಡೆದುಕೊಳ್ಳಲು ಈ ಆ್ಯಪ್‌ ನೆರವಾಗಲಿದೆ.

ಮೊಬೈಲ್‌ನಲ್ಲಿ ಈ ಆ್ಯಪ್‌ ಒಳಗೊಂಡಿದ್ದರೆ, ಗ್ರಾಹಕರು ಡೆಬಿಟ್‌ ಕಾರ್ಡ್‌ ಬಳಸುವ ಅಗತ್ಯ ಇರಲಾರದು.

ADVERTISEMENT

ವೀಸಾ, ಮಾಸ್ಟರ್‌ ಕಾರ್ಡ್‌ ಮತ್ತು ರೂಪೆಗಳಿಗೂ ಕ್ಯುಆರ್‌ ಕೋಡ್‌ ಅನ್ವಯಿಸಬಹುದಾಗಿದೆ. ಈ ನಗದುರಹಿತ ವಹಿವಾಟಿನಲ್ಲಿ ಡೆಬಿಟ್‌ ಕಾರ್ಡ್‌ ಮಾಹಿತಿಯು  ಸೋರಿಕೆಯಾಗುವುದಿಲ್ಲ ಎಂದು ಸಿಂಡಿಕೇಟ್ ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.