ADVERTISEMENT

ರಾಜ್ಯದ ಮಾರುಕಟ್ಟೆಗೆ ಹೋಂಡಾ ‘ಡಬ್ಲ್ಯೂಆರ್‌–ವಿ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ರಾಜ್ಯದ ಮಾರುಕಟ್ಟೆಗೆ ಹೋಂಡಾ ‘ಡಬ್ಲ್ಯೂಆರ್‌–ವಿ’
ರಾಜ್ಯದ ಮಾರುಕಟ್ಟೆಗೆ ಹೋಂಡಾ ‘ಡಬ್ಲ್ಯೂಆರ್‌–ವಿ’   
ಬೆಂಗಳೂರು:  ಮುಂಚೂಣಿ ಕಾರು ತಯಾರಿಕಾ ಕಂಪೆನಿ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ (ಎಚ್‌ಸಿಐಎಲ್‌) ಬಹು ನಿರೀಕ್ಷಿತ ಹೊಸ ‘ಹೋಂಡಾ ಡಬ್ಲ್ಯೂಆರ್‌–ವಿ’ ಕಾರನ್ನು ಸೋಮವಾರ ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿತು. 
 
ಈ ಕಾರನ್ನು ಮೊದಲು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಹಾಗೂ ನಿರ್ದೇಶಕ ರಮಣ್‌ ಕುಮಾರ್‌ ಶರ್ಮಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 
 
ಇದೇ ಮೊದಲ ಬಾರಿಗೆ ಹೋಂಡಾ ಇಂಡಿಯಾ ಈ ಕಾರನ್ನು ವಿನ್ಯಾಸ ಮಾಡಿದ್ದು, ಮೇಲ್ಭಾಗದ ಕಿಂಡಿ  ಹೊಂದಿದ ಮೊದಲ ಹೋಂಡಾ ಕಾರು ಇದಾಗಿದೆ ಎಂದು ಅವರು ತಿಳಿಸಿದರು.  
 
‘ಭಾರತದ ಗ್ರಾಹಕರ ಅಭಿರುಚಿ ಮತ್ತು ರಸ್ತೆಗಳ ಸ್ಥಿತಿಗತಿಗಳಿಗೆ ಅನುಸಾರವಾಗಿ ಈ ಕಾರನ್ನು ವಿನ್ಯಾಸ ಮಾಡಲಾಗಿದೆ’ ಎಂದು ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಜ್ಞಾನೇಶ್ವರ್‌ ಸೇನ್‌ ತಿಳಿಸಿದರು. 
 
‘ಹೋಂಡಾ ಜಾಜ್‌ ಸುಧಾರಿತ ಮಾದರಿಯಾಗಿದ್ದು ಆಕರ್ಷಕ ವಿನ್ಯಾಸ, ವಿಶಾಲ ಒಳಾಂಗಣ ಹೊಂದಿದೆ’ ಎಂದು ಮಾರಾಟ ಮತ್ತು ಮಾರುಕಟ್ಟೆ ವಿಭಾಗದ (ದಕ್ಷಿಣ ಭಾರತ) ವಲಯ ಮುಖ್ಯಸ್ಥ ಸೆಂಥಿಲ್‌ ಕುಮಾರ್‌ ನಟರಾಜನ್‌ ತಿಳಿಸಿದರು.
 
 ಪೆಟ್ರೋಲ್‌ ಮಾದರಿ 17.5 ಕಿ.ಮೀ ಮತ್ತು ಡೀಸೆಲ್‌ ಮಾದರಿ 25.5 ಕಿ.ಮೀ  ಮೈಲೇಜ್‌ ನೀಡುತ್ತವೆ. ಆರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು ಈಗಾಗಲೇ 2,500 ಗ್ರಾಹಕರು ಮುಂಗಡ ಬುಕ್ಕಿಂಗ್‌ ಮಾಡಿದ್ದಾರೆ ಎಂದರು. ಬೆಂಗಳೂರಿನಲ್ಲಿ ಎಕ್ಸ್‌ ಷೋರೂಂ ಬೆಲೆ ₹7,90,500 ರಿಂದ  ₹ 10,15,540. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.