ADVERTISEMENT

ವಿಕ್ರಂ ಲಿಮೆ ಹೊಸ ಮುಖ್ಯಸ್ಥ

ಪಿಟಿಐ
Published 12 ಫೆಬ್ರುವರಿ 2017, 19:30 IST
Last Updated 12 ಫೆಬ್ರುವರಿ 2017, 19:30 IST
ವಿಕ್ರಂ ಲಿಮೆ  ಹೊಸ ಮುಖ್ಯಸ್ಥ
ವಿಕ್ರಂ ಲಿಮೆ ಹೊಸ ಮುಖ್ಯಸ್ಥ   

ನವದೆಹಲಿ (ಪಿಟಿಐ): ರಾಷ್ಟ್ರೀಯ ಷೇರುಪೇಟೆ ಎನ್‌ಎಸ್‌ಇ ಯ ಹೊಸ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ (ಎಂ.ಡಿ) ಮೂಲಸೌಲಭ್ಯ ಅಭಿವೃದ್ಧಿ ಹಣಕಾಸು ಸಂಸ್ಥೆ (ಐಡಿಎಫ್‌ಸಿ) ವ್ಯವಸ್ಥಾಪಕ ನಿರ್ದೇಶಕ ವಿಕ್ರಂ ಲಿಮೆ ಅವರನ್ನು ನೇಮಕ ಮಾಡಲಾಗಿದೆ.

ಐದು ವರ್ಷ ಈ ಹುದ್ದೆಯಲ್ಲಿರುವ ಲಿಮೆ ಅವರಿಗೆ ವಾರ್ಷಿಕ ₹8 ಕೋಟಿ ವೇತನ ಪ್ಯಾಕೇಜ್‌ ನಿಗದಿ ಮಾಡಲಾಗಿದೆ. ಚಿತ್ರಾ ರಾಮಕೃಷ್ಣ ಅವರ ಹಠಾತ್‌ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. ಫೆ.3ರಂದು ನಡೆದ ಎನ್‌ಎಸ್‌ಇ ನಿರ್ದೇಶಕ ಮಂಡಳಿ   ಸಭೆಯಲ್ಲಿ ಲಿಮೆ ನೇಮಕಕ್ಕೆ ಅಧಿಕೃತ ಮುದ್ರೆ ಬಿದ್ದಿತ್ತು. 

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಆಡಳಿತ ನೋಡಿಕೊಳ್ಳಲು ಸುಪ್ರೀಂಕೋರ್ಟ್‌  ನೇಮಿಸಿದ ನಾಲ್ವರು ಸದಸ್ಯರ ಸಮಿತಿಯಲ್ಲಿಯೂ ಲಿಮೆ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.