ADVERTISEMENT

ವೃದ್ಧಿ ದರ ಶೇ 8ಕ್ಕಿಂತ ಹೆಚ್ಚು: ಪನಗರಿಯಾ

ಪಿಟಿಐ
Published 25 ಸೆಪ್ಟೆಂಬರ್ 2016, 19:30 IST
Last Updated 25 ಸೆಪ್ಟೆಂಬರ್ 2016, 19:30 IST
ಪನಗರಿಯಾ
ಪನಗರಿಯಾ   

ನವದೆಹಲಿ: ‘ಪ್ರಸಕ್ತ ಹಣಕಾಸು ವರ್ಷದ ಉಳಿದ ಅವಧಿಯಲ್ಲಿ ದೇಶಿ ಆರ್ಥಿಕ ವೃದ್ಧಿ ದರ ಶೇ 8ಕ್ಕಿಂತ ಹೆಚ್ಚಿಗೆ ಇರಲಿದೆ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಉತ್ತಮ ಮುಂಗಾರು, ಆರ್ಥಿಕ ಸುಧಾರಣಾ ಕ್ರಮಗಳ ಜಾರಿ ಮತ್ತು ಕೇಂದ್ರ ಸರ್ಕಾರ ಸಕಾಲಕ್ಕೆ ಕೈಗೊಂಡ ಹಲವಾರು ರಚನಾತ್ಮಕ ಮತ್ತು ಉದ್ಯಮಸ್ನೇಹಿ ನಿರ್ಧಾರಗಳಿಂದಾಗಿ ಈ ಹಣಕಾಸು ವರ್ಷದ ಉಳಿದ ತ್ರೈಮಾಸಿಕಗಳಲ್ಲಿ ಜಿಡಿಪಿ ದರವು ಶೇ 8ಕ್ಕಿಂತ ಹೆಚ್ಚಿಗೆ ಇರಲಿದೆ’ ಎಂದು ಅವರು ಹೇಳಿದ್ದಾರೆ.

ಈ ವರ್ಷದ ಏಪ್ರಿಲ್‌– ಜೂನ್‌ ತಿಂಗಳ ತ್ರೈಮಾಸಿಕದಲ್ಲಿ ಜಿಡಿಪಿ ದರವು 6 ತ್ರೈಮಾಸಿಕಗಳ ಕನಿಷ್ಠ ಮಟ್ಟವಾದ ಶೇ 7.1ರಷ್ಟಾಗಿತ್ತು. ಗಣಿಗಾರಿಕೆ, ಕಟ್ಟಡ ನಿರ್ಮಾಣ ಮತ್ತು ಕೃಷಿ ವಲಯದ ಕಳಪೆ ಸಾಧನೆ ಫಲವಾಗಿ ವೃದ್ಧಿ ದರ ಕುಸಿತ ದಾಖಲಿಸಿತ್ತು. ಹಿಂದಿನ ವರ್ಷದ ಜನವರಿ – ಮಾರ್ಚ್‌ ಅವಧಿಯಲ್ಲಿ ಇದು
ಶೇ 7.9ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.