ಬೆಂಗಳೂರು: ಗುಜರಾತ್ನ ಗಾಂಧಿನಗರದಲ್ಲಿ ೨೦೧೫ರ ಜ. ೧೧ರಿಂದ ಮೂರು ದಿನಗಳ ಕಾಲ ನಡೆಯಲಿರುವ ವೈಬ್ರಂಟ್ ಗುಜರಾತ್ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವರು.
ಜಾಗತಿಕ ಹೂಡಿಕೆದಾರರ ಈ ಸಮಾವೇಶದಲ್ಲಿ ಜಪಾನ್, ಯುನೈಟೆಡ್ ಕಿಂಗ್ಡಂ, ಕೆನಡಾ, ಆಸ್ಟ್ರೇಲಿಯಾ, ಸಿಂಗಪುರ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ನ ಉದ್ಯಮ ಕ್ಷೇತ್ರದ ದಿಗ್ಗಜರು ಪಾಲ್ಗೊಳ್ಳುವರು ಎಂದು ಗುಜರಾತ್ನ ಹಣಕಾಸು ಮತ್ತು ಇಂಧನ ಸಚಿವ ಸೌರಭ್ಭಾಯ್ ಪಟೇಲ್ ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ವೈಬ್ರಂಟ್ ಗುಜರಾತ್ಗೆ ಆಹ್ವಾನ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತ-ನಾಡಿದ ಅವರು, ಮೋದಿ ಮುಖ್ಯಮಂತ್ರಿಯಾಗಿದ್ದಾಗ ವಿದೇಶಿ ಹೂಡಿಕೆ-ದಾರರನ್ನು ಗುಜರಾತ್ನತ್ತ ಆಕರ್ಷಿಸಲು ಈ ಕಾರ್ಯಕ್ರಮ ಆರಂಭಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.