ADVERTISEMENT

ಷೇರುಪೇಟೆಯಲ್ಲಿ ಕರಡಿ ಕುಣಿತ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 6:44 IST
Last Updated 3 ಜೂನ್ 2015, 6:44 IST

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆಯಲ್ಲಿ (ಬಿಎಸ್‌ಇ) ಸತತ ಕುಸಿತ  ಮುಂದುವರಿದಿದೆ.  ಮಂಗಳವಾರ 660 ಅಂಶಗಳಷ್ಟು ನಷ್ಟ ಅನುಭವಿಸಿದ್ದ ಸಂವೇದಿ ಸೂಚ್ಯಂಕ ಬುಧವಾರ ಮಧ್ಯಾಹ್ನದ ವೇಳೆಗೆ ಮತ್ತೆ 369 ಅಂಶಗಳಷ್ಟು ಹಾನಿ ಅನುಭವಿಸಿ 27 ಸಾವಿರದ ಗಡಿ ಇಳಿಯಿತು.

ಈ ಬಾರಿ ಮುಂಗಾರು ವಾಡಿಕೆಗಿಂತ ಕಡಿಮೆ ಇರಲಿದೆ ಮತ್ತು ಬರದ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿರುವುದು ಷೇರುಪೇಟೆಯಲ್ಲಿ ತಲ್ಲಣ ಮೂಡಿಸಿದೆ. ಆತಂಕಕ್ಕೆ ಒಳಗಾಗಿರುವ ಹೂಡಿಕೆದಾರರು ಒಮ್ಮಲೆ ಷೇರು ಮಾರಾಟಕ್ಕೆ ಮುಂದಾಗಿರುವುದು ದಿಢೀರ್‌ ಕುಸಿತಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ದೇಶದ ತಯಾರಿಕಾ ವಲದ ಪ್ರಗತಿ ಕೂಡ ಕಳೆದ 13 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಕುಸಿತ ಕಂಡಿರುವುದು ಕೂಡ ಹಣಕಾಸು ಪೇಟೆಯಲ್ಲಿ ಅಸ್ಥಿರತೆ ಮೂಡಿಸಿದೆ.

ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ 67 ಅಂಶಗಳನ್ನು ಕಳೆದುಕೊಂಡು 8,169 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.