ADVERTISEMENT

ಸಂಬಂಧ ಬೆಸೆಯಲು ಸ್ಮಾರ್ಟ್‌ಫೋನ್‌ ಬಳಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2017, 19:30 IST
Last Updated 20 ಜೂನ್ 2017, 19:30 IST
ಸಂಬಂಧ ಬೆಸೆಯಲು ಸ್ಮಾರ್ಟ್‌ಫೋನ್‌ ಬಳಕೆ
ಸಂಬಂಧ ಬೆಸೆಯಲು ಸ್ಮಾರ್ಟ್‌ಫೋನ್‌ ಬಳಕೆ   

ಸ್ಮಾರ್ಟ್‌ಫೋನ್‌ಗಳಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಹೊಸಬರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಅಮೆರಿಕದ ಇತ್ತೀಚಿನ ಸಂಶೋಧನೆ ತಿಳಿಸಿದೆ.

ಬೇಲರ್‌ ವಿಶ್ವವಿದ್ಯಾಲಯ ಈ ಸಂಶೋಧನೆ ನಡೆಸಿದ್ದು ಯುವಕರಲ್ಲಿಯೇ ಹೆಚ್ಚಾಗಿ ಇಂತಹ ಪ್ರವೃತ್ತಿ ಕಂಡುಬರುತ್ತಿದೆ. ಸಂಬಂಧಗಳನ್ನು ನಿರ್ಲಕ್ಷಿಸಿ ಫೋನ್‌ಗಳಿಗೆ ಅಂಟಿಕೊಂಡಿರುವವರು ಕ್ರಮೇಣ ಸಾಮಾಜಿಕ ಜಾಲ ತಾಣಗಳಲ್ಲಿ ಹೊಸ ಸಂಬಂಧಗಳ ಹುಡುಕಾಟದಲ್ಲಿ ತೊಡಗಿರುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳ ಮೂಲಕ ಹೊಸ ಸಂಬಂಧಗಳನ್ನು ಹುಡುಕಿಕೊಳ್ಳುವುದೇ ಯುವ ಜನರ ಹೊಸ ಫ್ಯಾಷನ್‌ ಆಗಿದೆ. ಅಮೆರಿಕದ ಆಯ್ದ ಎರಡು ನಗರಗಳಲ್ಲಿ ಇಂತಹ ಪ್ರವೃತ್ತಿ (Phubbed people) ಕುರಿತಂತೆ ಸುಮಾರು ಮೂರು ಸಾವಿರ ಜನರನ್ನು ಸಂದರ್ಶನಕ್ಕೆ ಒಳಪಡಿಸಲಾಗಿತ್ತು.

ADVERTISEMENT

ಪ್ರತಿ ನಿತ್ಯ ಇವರೆಲ್ಲರೂ ಗರಿಷ್ಠ 90 ನಿಮಿಷಗಳ ಕಾಲ ಸಾಮಾಜಿಕ ಜಾಲ ತಾಣಗಳಲ್ಲಿ ಕಾಲ ಕಳೆಯುತ್ತಾರೆ ಎಂಬ ಮಾಹಿತಿ ಸಂದರ್ಶನದಿಂದ  ತಿಳಿದು ಬಂದಿದೆ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ ಬೇಲರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮೆರಿಡಿಕ್ ಡೇವಿಡ್ ಹೇಳುತ್ತಾರೆ.

ಬಂಧುಗಳು, ಸ್ನೇಹಿತರನ್ನು ನಿರ್ಲಕ್ಷಿಸಿ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ಆದ್ಯತೆ ನೀಡುವವರು ಕ್ರಮೇಣ ಖಿನ್ನತೆಗೆ ಒಳಗಾಗಿ ಮಾನಸಿಕ ಒತ್ತಡದಿಂದ ಬಳಲುತ್ತಿರುತ್ತಾರೆ. ಮನೋವ್ಯಾಧಿಗೂ ಗುರಿಯಾಗುತ್ತಾರೆ. ಇಂಥವರು ಕ್ರಮೇಣ ಸಾಮಾಜಿಕ ಜಾಲ ತಾಣಗಳತ್ತ ಗಮನ ಹರಿಸಿ ಹೊಸ ಸಂಬಂಧಗಳನ್ನು ಬೆಳೆಸಲು ಮುಂದಾಗುತ್ತಾರೆ. ಇದರಿಂದ ಅವರಿಗೆ ಸ್ವಲ್ಪ ಮಟ್ಟಿನ ಮಾನಸಿಕ  ನೆಮ್ಮದಿ ಸಿಗುತ್ತದೆ.

ಒತ್ತಡದ ಕೇತ್ರಗಳಲ್ಲಿ ಕೆಲಸ ಮಾಡುವವರು ಕೂಡ ಹೊಸಬರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ಸಂವಹನ ನಡೆಸುವುದರಿಂದ  ನೆಮ್ಮದಿ ಪಡೆಯುತ್ತಾರೆ.

ಹಳೆಯ ಗೆಳೆಯರು, ಸಂಬಂಧಿಕರೊಂದಿಗೆ ಹರಟೆ ಹೊಡೆಯುವುದಕ್ಕಿಂತ ಹೊಸಬರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ಮಾತುಕತೆ ನಡೆಸುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ ಎಂದು ಈ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.