ತಿರುವನಂತಪುರ: 2017ರ ಏಪ್ರಿಲ್–ಡಿಸೆಂಬರ್ ಅವಧಿಯಲ್ಲಿ ₹13,168 ಕೋಟಿ ಮೌಲ್ಯದ 7.97 ಲಕ್ಷ ಟನ್ಗಳಷ್ಟು ಸಂಬಾರ ಮತ್ತು ಸಂಬಾರ ಪದಾರ್ಥಗಳನ್ನು ರಫ್ತು ಮಾಡಲಾಗಿದೆ.
ಈ ರಫ್ತು ವಹಿವಾಟು, ಮೌಲ್ಯದ ಲೆಕ್ಕದಲ್ಲಿ ಶೇ 20 ರಷ್ಟು ಹಾಗೂ ರೂಪಾಯಿ ಲೆಕ್ಕದಲ್ಲಿ ಶೇ 4 ರಷ್ಟು ಏರಿಕೆಯಾಗಿದೆ.
2016ರ ಇದೇ ಅವಧಿಯಲ್ಲಿ ₹ 12,607 ಕೋಟಿ ಮೌಲ್ಯದ 6.63 ಲಕ್ಷ ಟನ್ ರಫ್ತು ಮಾಡಲಾಗಿತ್ತು ಎಂದು ಸಂಬಾರ ಮಂಡಳಿ ಮಾಹಿತಿ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.